ಬೆಳಗಾವಿ: ತಾಲ್ಲೂಕಿನ ಕಲಕಾಂಬ ಗ್ರಾಮದ ಮನೆಯೊಂದರಲ್ಲಿ ಜೂಟಾದಲ್ಲಿ ತೊಡಗಿದ್ದ ಆರೋಪದ ಮೇಲೆ 8 ಮಂದಿ ಆರೋಪಿಗಳನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಇಲ್ಲಿನ ರುಕ್ಮಿಣಿ ನಗರದ ಎಸ್. ಮಕಾನದಾರ, ವೆಂಕಪ್ಪ ಸಂದಿಮನಿ, ಕಾಕತಿಯ ಕಣ್ಣಯ್ಯ ಚಿಕ್ಕಲದಿನ್ನಿ, ಕಣಬರ್ಗಿಯ ನಾಗೇಶ ಟ್ಯಾನಗಿ,ಹನುಮಂತ ಶೀಗಿಹಳ್ಳಿ, ಕಲಕಾಂಬದ ಕರೆಪ್ಪ ನಾಯಕ, ರವಿ ಕಾನಟ್ಟಿ ಮತ್ತು ಮುತಗಾದ ಸಂಜೀವ ಪಾಟೀಲ ಬಂಧಿತರು. ಅವರಿಂದ ₹ 6,100 ಮತ್ತು 5 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ದಾಖಲಾಗಿದೆ.
10 ದ್ವಿಚಕ್ರವಾಹನಗಳು ವಶಕ್ಕೆ
ಬೆಳಗಾವಿ: ವಿವಿಧೆಡೆ ದ್ವಿಚಕ್ರವಾಹನಗಳನ್ನು ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಕ್ಯಾಂಪ್ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಉದ್ಯಮಬಾಗ್ ರಾಜಾರಾಮ ನಗರದ ಪ್ರಸಾದ ಪಾಟೀಲ (24) ಮತ್ತು ಯಳ್ಳೂರ ಗ್ರಾಮದ ಅಕ್ಷಯ ತಂಡಾಲೆ (22) ಬಂಧಿತರು. ಅವರಿಂದ ₹ 4.50 ಲಕ್ಷ ಮೌಲ್ಯದ 10 ದ್ವಿಚಕ್ರವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್‌ಸ್ಪೆಕ್ಟರ್ ಪ್ರಭಾಕರ ಎಸ್. ಧರ್ಮಟ್ಟಿ ನೇತೃತ್ವದಲ್ಲಿ ಸಿಬ್ಬಂದಿ ಮಹೇಶ ಪಾಟೀಲ, ಬಿ.ಎಸ್. ರುದ್ರಾಪೂರ, ಬಿ.ಎಂ. ನರಗುಂದ ಹಾಗೂ ಶ್ರೀಧರ ತಳವಾರ ಈ ಕಾರ್ಯಾಚರಣೆ ನಡೆಸಿದ್ದಾರೆ. ಇವರ ಕಾರ್ಯವನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.