ಭಾನುವಾರ, ಅಕ್ಟೋಬರ್ 24, 2021
21 °C

ಗಾಂಧೀಜಿ ಆದರ್ಶ ಅಳವಡಿಸಿಕೊಳ್ಳಿ: ಆನಂದ ಥೈಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೆಲಸಂಗ: ‘ಗಾಂಧೀಜಿ ಮೊದಲಾದ ಮಹಾತ್ಮರ ಜೀವನವನ್ನು ಮೆಲಕು ಹಾಕುವುದರೊಂದಿಗೆ ಅವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಬಿಜೆಪಿ ಒಬಿಸಿ ಮೋರ್ಚಾ ಚಿಕ್ಕೋಡಿ ಜಿಲ್ಲಾ ಘಟಕದ ಸಂಚಾಲಕ ಆನಂದ ಥೈಕಾರ ಹೇಳಿದರು.

ಬಿಜೆಪಿ ಒಬಿಸಿ ಮೋರ್ಚಾದಿಂದ ಗ್ರಾಮದ ಜ್ಞಾನಭಾರತಿ ಶಾಲೆಯಲ್ಲಿ ಗಾಂಧೀಜಿ ಮತ್ತು ಲಾಲ್ ಬಹದ್ದೂರ್‌ ಶಾಸ್ತ್ರಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಖಾದಿ ಟವೆಲ್ ಮತ್ತು ಸಿಹಿ ವಿತರಿಸಿ ಮಾತನಾಡಿದರು.

‘ಆಚರಣೆಗಳನ್ನು ಕಾಟಾಚಾರಕ್ಕೆ ಮಾಡಬಾರದು. ಸರಕಾರದ ಆದೇಶಕ್ಕಾಗಿ ಆಚರಿಸುವ ಜಯಂತಿಗಳು ಯಾವ ಪರಿಣಾಮವನ್ನೂ ಬೀರಲಾರವು. ಗಾಂಧೀಜಿ ಕನಸುಗಳನ್ನು ನನಸಾಗಿಸಲು ನಾವೆಲ್ಲರೂ ಮುಂದಾಗಬೇಕು’ ಎಂದು ಆಶಿಸಿದರು.

ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಶೈಲ ಶೆಲ್ಲೆಪ್ಪಗೋಳ, ಕಾರ್ಯದರ್ಶೀ ಜಗದೀಶ ಮಠದ, ಗೋಪಾಲ ಶೆಲ್ಲೆಪ್ಪಗೋಳ, ರಾಜು ಕಲಾಲ, ಗಪೂರ ಮುಲ್ಲಾ, ಸಹ ಸಂಚಾಲಕ ಬಸವರಾಜ ಅಸ್ಕಿ ಉಪಸ್ಥಿತರಿದ್ದರು.

ಖವಟಕೊಪ್ಪದಲ್ಲಿ ಆಚರಣೆ
ಖವಟಕೊಪ್ಪ:
ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಾತ್ಮ ಗಾಂಧೀಜಿ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

ಮುಖ್ಯೋಪಾಧ್ಯಾಯರು, ಶಿಕ್ಷಕರು, ಗ್ರಾಮ ಪಂಚಾಯ್ತಿ, ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಮಕ್ಕಳು ಇದ್ದರು.

ಶಿವಪುತ್ರ ನೇಮಕ
ನಾಗರಮುನ್ನೋಳಿ:
ಗ್ರಾಮದ ಮುಖಂಡ ಶಿವಪುತ್ರ ಮನಗೂಳಿ ಅವರನ್ನು ಕಾಂಗ್ರೆಸ್ ಚಿಕ್ಕೋಡಿ ರೈತ ಮತ್ತು ರೈತ ಕಾರ್ಮಿಕರ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶೀಯಾಗಿ ನೇಮಕ ಮಾಡಲಾಗಿದೆ.

ಆದೇಶಪತ್ರವನ್ನು ಶಾಸಕ ಗಣೇಶ ಹುಕ್ಕೇರಿ ಈಚೆಗೆ ವಿತರಿಸಿದರು. ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಮಹಾವೀರ ಮೋಹಿತೆ, ಸಿದ್ದಪ್ಪ ಮರ‍್ಯಾಯಿ, ಮಿಲನ ಪಾಟೀಲ, ಎಚ್.ಎಸ್. ನಸಲಾಪುರೆ, ಶಂಕರಗೌಡ ಪಾಟೀಲ, ಗುಲಾಬ ಬಾಗವಾನ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು