ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಕವಟಗಿಮಠ ಅಭಿಮಾನಿಗಳಿಂದ ‘ಗೋ ಬ್ಯಾಕ್‌ ಶೆಟ್ಟರ್‌’ ಅಭಿಯಾನ

Published 13 ಮಾರ್ಚ್ 2024, 14:40 IST
Last Updated 13 ಮಾರ್ಚ್ 2024, 14:40 IST
ಅಕ್ಷರ ಗಾತ್ರ

ಬೆಳಗಾವಿ: ಜಗದೀಶ ಶೆಟ್ಟರ್‌ ಅವರಿಗೆ ಬೆಳಗಾವಿ ಲೋಕಸಭೆ ಟಿಕೆಟ್‌ ಸಿಗಲಿದೆ ಎಂಬ ಸುದ್ದಿ ದಟ್ಟವಾಗಿರುವ ಹಿನ್ನೆಲೆಯಲ್ಲಿ  ಟಿಕೆಟ್‌ ಆಕಾಂಕ್ಷಿಯಾಗಿದ್ದ ಮಹಾಂತೇಶ ಕವಟಗಿಮಠ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ‘ಗೋ ಬ್ಯಾಕ್ ಶೆಟ್ಟರ್‌’ ಅಭಿಯಾನ ಆರಂಭಿಸಿದ್ದಾರೆ.

‘ಪಕ್ಷದಿಂದ ಪಕ್ಷಕ್ಕೆ ಹಾರುವ ಶೆಟ್ಟರ್‌ ನಮಗೆ ಬ್ಯಾಡ; ಮಹಾಂತೇಶ ಕವಟಗಿಮಠ ಅವರೇ ನಮ್ಮ ನಾಯಕ ನೋಡ’, ‘ಸ್ಥಳೀಯ ನಾಯಕರೇ ನಮಗೆ ಹಿತ; ಅವರಿಗೇ ನಮ್ಮ ಮತ’ ಮತ್ತು ‘ಅಧಿಕಾರಕ್ಕಾಗಿ ಪಕ್ಷ ಬಿಟ್ಟವರಿಗೆ ಕ್ಷೇತ್ರ ಬಿಡುವುದು ದೊಡ್ಡದಲ್ಲ’ ಎಂಬ ಅಡಿಬರಹಗಳನ್ನು ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಹಾಗೂ ವಾಟ್ಸ್ಆ್ಯ‍ಪ್‌ ಮೂಲಕ ಹರಿಬಿಟ್ಟಿದ್ದಾರೆ.

ಶೆಟ್ಟರ್‌ ಅವರು ‘ಹಸ್ತ’ದ ಪೇಂಟಿಂಗ್‌ ಮಾಡುತ್ತಿರುವ ವ್ಯಂಗ್ಯಚಿತ್ರಗಳನ್ನೂ ಜಾಲತಾಣಗಳಲ್ಲಿ ಹರಿಬಿಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT