ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಕಾಕ ವೈದ್ಯರ ಕೃತಿ ಬ್ರೈಲ್ ಲಿಪಿಯಲ್ಲಿ

Last Updated 10 ಮಾರ್ಚ್ 2021, 6:48 IST
ಅಕ್ಷರ ಗಾತ್ರ

ಗೋಕಾಕ (ಬೆಳಗಾವಿ): ಇಲ್ಲಿನ ದಂತ ವೈದ್ಯ ಡಾ.ಸಚಿನ ಚಂದ್ರಶೇಖರ ಗುಗವಾಡ ಅವರು ಅಂಧರ ದಂತ ಕುರಿತಾಗಿ ಇಂಗ್ಲಿಷ್‌ ಭಾಷೆಯಲ್ಲಿ 2016ರಲ್ಲಿ ರಚಿಸಿದ ‘ಟೂಥ್ ಟೀಚರ್’ ಹಾಗೂ ಬ್ರೈಲ್‌ ಲಿಪಿಯಲ್ಲಿ ರೂಪಿಸಿರುವ ‘ಲೆಟಸ್ ಫೈಟ್ ಕೊರೊನಾ’ ಮತ್ತು ‘ಡಯಟ್ ಅಂಡ್ ನ್ಯೂಟ್ರಿಷನ್’ ಎಂಬ ಕೃತಿಗಳಿಗೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಾನ್ಯತೆ ಲಭಿಸಿದೆ.

ಅಂಧರ ಕುರಿತಾಗಿ ಹೊಂದಿರುವ ಅಪಾರ ಕಾಳಜಿಯ ಪರಿಣಾಮವಾಗಿ ಅವರು ಈ ಕೃತಿಗಳನ್ನು ರಚಿಸಿದ್ದಾರೆ. ಈಚೆಗೆ ಗೋವಾದ ಪಣಜಿ ನಗರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಅಲ್ಲಿನ ಮುಖ್ಯಮಂತ್ರಿ ಪ್ರಮೋದ ಸಾವಂತ ಅವರು ‘ಲೆಟಸ್ ಫೈಟ್ ಕೊರೊನಾ’ ಮತ್ತು ‘ಡಯಟ್ ಅಂಡ್ ನ್ಯೂಟ್ರಿಷನ್’ ಕೃತಿಗಳನ್ನು ಬಿಡುಗಡೆ ಮಾಡಿದ್ದಾರೆ.

ಪ್ರಸ್ತುತ ನೆರೆಯ ಮಹಾರಾಷ್ಟ್ರದ ಕರಾಡ್ ಪಟ್ಟಣದ ಕೃಷ್ಣಾ ದಂತ ವಿಜ್ಞಾನ ಸಂಸ್ಥೆಯಲ್ಲಿ ದಂತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ.ಸಚಿನ ಅವರು ಇಂಗ್ಲಿಷ್ ಭಾಷೆಯಲ್ಲಿ ರಚಿಸಿದ ಈ ಎಲ್ಲ ಕೃತಿಗಳು ಕನ್ನಡ, ಕೊಂಕಣಿ, ಮರಾಠಿ ಮತ್ತು ಮಲೆಯಾಳಂ ಭಾಷೆಗಳಿಗೆ ತರ್ಜುಮೆಗೊಂಡಿವೆ. ಕೊಂಕಣಿ ಭಾಷೆಯ ಮೊಟ್ಟ ಮೊದಲ ಬ್ರೇಲ್ ಲಿಪಿಯಲ್ಲಿ ಮೂಡಿಬಂದ ಕೃತಿ ಎಂಬ ಹೆಗ್ಗಳಿಕೆಗೂ ಇವು ಪಾತ್ರವಾಗಿವೆ.

ಈ ಕೃತಿಗಳ ಪೈಕಿ ‘ಟೂಥ್ ಟೀಚರ್’ ಕೃತಿಗೆ 2019ರಲ್ಲಿ ಪ್ಯಾರಿಸ್‌ನ ಇನ್‌ಸ್ಟಿಟ್ಯೂಟ್‌ ಆಫ್‌ ನ್ಯಾಷನಲ್ ಡೆಸ್ ಜೀವುನ್ಸ್ ಅಬ್ಯುಗ್ಲೆಸ್ ಎಂಬ ಸಂಸ್ಥೆಯು ಕೃತಿಗೆ ಅಂತರರಾಷ್ಟ್ರೀಯ ಮನ್ನಣೆಯನ್ನು ನೀಡಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಕೃತಿಗಳಿಗೆ ವ್ಯಾಪಕ ಬೇಡಿಕೆ ಉಂಟಾಗಿರುವ ಹಿನ್ನೆಲೆಯಲ್ಲಿ ಅವುಗಳನ್ನು ಬ್ರೈಲ್‌ ಲಿಪಿಗೂ ಅನುವಾದಿಸಲಾಗಿದೆ. ಅವು, ಎಲ್ಲೆಡೆ ಲಭ್ಯ ಇವೆ. ಈ ಕೃತಿಗೆ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲೂ ನೋಂದಣಿಗೆ ಶಿಫಾರಸು ಮಾಡಲಾಗಿದೆ ಎನ್ನುತ್ತಾರೆ ಡಾ.ಸಚಿನ.

‘ಈ ವಿಶೇಷ ಕೃತಿಗಳ ರಚನೆಯಲ್ಲಿ ದಂತ ವೈದ್ಯೆಯೂ ಅಗಿರುವ ಪತ್ನಿ ಅನುಜಾ ಮತ್ತು ವೈದ್ಯ ತಂದೆ ಡಾ.ಚಂದ್ರಶೇಖರ ಅವರ ಸಹಕಾರ ಸ್ಮರಣೀಯ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT