ಪ್ರಜಾವಾಣಿ ವಾರ್ತೆ

ಗೋಕಾಕ: ಇಲ್ಲಿನ ನಗರಸಭೆಯಲ್ಲಿ 2024-25ನೇ ಸಾಲಿನ ಪರಿಷ್ಕೃತ ಆಯವ್ಯಯ ಮತ್ತು 2025-26ನೇ ಸಾಲಿನ ₹4.95 ಲಕ್ಷ ಉಳಿತಾಯದ ಬಜೆಟ್ ಅನ್ನು ಪೌರಾಯುಕ್ತ ಆರ್.ಪಿ. ಜಾಧವ ಮಂಡಿಸಿದರು.

15ನೇ ಹಣಕಾಸು ಆಯೋಗ ಮತ್ತು ರಾಜ್ಯ ಹಣಕಾಸು ಆಯೋಗದಿಂದ ಬಿಡುಗಡೆ ಆಗಬಹುದಾದ ಅನುದಾನದಲ್ಲಿ ಅಂದಾಜು ₹4.30 ಕೋಟಿಯಲ್ಲಿ ಹೊಸ ರಸ್ತೆ, ಚರಂಡಿ, ಉದ್ಯಾನ ಹಾಗೂ ನೀರು ಪೂರೈಕೆ ವ್ಯವಸ್ಥೆ ಕಲ್ಪಿಸಲಾಗುವುದು. ಒಟ್ಟಾರೆ ₹67.42 ಕೋಟಿಯ ಆದಾಯ ಮತ್ತು ₹67.37 ಕೋಟಿ ವೆಚ್ಚ ಅಂದಾಜು ಮಾಡಲಾಗಿದೆ’ ಎಂದರು.

‘ಎಸ್.ಎಫ್.ಸಿ. ವಿಶೇಷ ಅನುದಾನದಲ್ಲಿ ಲಕ್ಷ್ಮಿದೇವಿ ಜಾತ್ರೆ ಅಂಗವಾಗಿ ಬಿಡುಗಡೆ ಆಗಬಹುದಾದ ಅನುದಾನದಲ್ಲಿ ರಸ್ತೆ, ಚರಂಡಿ, ವಿದ್ಯುತ್, ಶೌಚಾಲಯ ಹಾಗೂ ಇತರೆ ಮೂಲಸೌಕರ್ಯ ಕಲ್ಪಿಸಲು ₹30 ಕೋಟಿ ನಿರೀಕ್ಷಿಸಲಾಗಿದೆ.₹2.50 ಕೋಟಿ ಅನುದಾನದಲ್ಲಿ ವಾಣಿಜ್ಯ ಮಳಿಗೆಗಳ ಕಾಮಗಾರಿ ಮುಕ್ತಾಯಗೊಂಡಿದೆ’ ಎಂದು ತಿಳಿಸಿದರು.

ನಗರಸಭೆಯ ಸಂಪನ್ಮೂಲ ಹೆಚ್ಚಿಸಿಕೊಳ್ಳಲು ಮತ್ತು ವೆಚ್ಚಗಳ ನಿಯಂತ್ರಣಕ್ಕಾಗಿ ಸೂಚನೆ ನೀಡಲಾಯಿತು.

ಅಧ್ಯಕ್ಷ ಪ್ರಕಾಶ ಮುರಾರಿ, ಉಪಾಧ್ಯಕ್ಷೆ ಬಿ.ಎ. ಜಮಾದಾರ, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಶೈಲ ಯಕ್ಕುಂಡಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿ.ವೈ. ಪಾಟೀಲ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಂ.ಎಚ್. ಗಜಾಕೋಶ ಸೇರಿದಂತೆ ನಗರಸಭೆ ಸದಸ್ಯರು ಹಾಗೂ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.