ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಲಹೊಂಗಲ: ಗುರು ಸಿದ್ಧಾರೂಢಮಠದ ಅದ್ಧೂರಿ ರಥೋತ್ಸವ

Published 18 ಏಪ್ರಿಲ್ 2024, 14:20 IST
Last Updated 18 ಏಪ್ರಿಲ್ 2024, 14:20 IST
ಅಕ್ಷರ ಗಾತ್ರ

ಬೈಲಹೊಂಗಲ: ಸಮೀಪದ ಹಾರೂಗೊಪ್ಪ ಗ್ರಾಮದ ಗುರು ಸಿದ್ಧಾರೂಢಮಠದ ಜಾತ್ರಾ ಮಹೋತ್ಸವದ ಮಹಾರಥೋತ್ಸವ ಭಕ್ತರ ಹರ್ಷೋದ್ಘಾರ ನಡುವೆ ಬುಧವಾರ ಸಂಜೆ ವಿಜೃಂಭಣೆಯಿಂದ ನೆರವೇರಿತು.

ಬೆಳಗ್ಗೆಯಿಂದ ರಾತ್ರಿಯವರೆಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಮಠಕ್ಕೆ ಬಂದು ಗುರು ಸಿದ್ದಾರೂಢರ ಪ್ರತಿಮೆಗೆ ಶ್ರದ್ಧೆ, ಭಕ್ತಿಯಿಂದ ಕೈ ಮುಗಿದು‌ ಪ್ರಾರ್ಥನೆ ಸಲ್ಲಿಸಿದರು.

ಮಹಾರಥೋತ್ಸವ ವಿವಿಧ ಪುಷ್ಪಮಾಲೆ, ಬಾಳೆ, ಮಾವಿನ ತೋರಣ, ಬಣ್ಣದ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಿತು. ಭಕ್ತರು ಹರಹರ ಮಹಾದೇವ, ಗುರು ಸಿದ್ಧಾರೂಢ ಮಹಾರಾಜಕೀ ಜೈ ಎಂದು ಘೋಷಣೆ ಕೂಗಿ ರಥ ಎಳೆದು ಪುನೀತರಾದರು.

ರಥ ಸಾಗಿದ ಮಾರ್ಗದಲ್ಲಿ ಕರಡಿ ಮಜಲು, ಡೊಳ್ಳು, ಭಜನೆ, ಹೆಣ್ಣು ಮಕ್ಕಳು ಆರುತಿ ಹಿಡಿದು ಸಾಗಿದರು. ಭಕ್ತರು ಓಂ ನಮಃ ಶಿವಾಯ ನಾಮಸ್ಮರಣೆ ಮಾಡುತ್ತ ರಥ ಎಳೆದರು.

ಅರಭಾಂವಿ ಗುರು ಬಸವಲಿಂಗ ಸ್ವಾಮೀಜಿ ರಥಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಮಲ್ಲಾಪೂರ ಚಿದಾನಂದ ಸ್ವಾಮೀಜಿ ನೇತೃತ್ವದಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ರುದ್ರಾ ಅಭಿಷೇಕ, ದ್ವಜಾರೋಹಣ, ಕಳಸಾರೋಹಣ ನೆರವೇರಿತು. ಸುತ್ತಮುತ್ತಲಿನ ಗ್ರಾಮಗಳಿಂದ ರಾತ್ರಿ ಭಜನಾ ಕಾರ್ಯಕ್ರಮ ನಡೆಯಿತು.

ಬೆಳಿಗ್ಗೆ ರುದ್ರಾಭಿಷೇಕ, ಪಾಲಿಕೆ ಉತ್ಸವ, ತೊಟ್ಟಿಲೋತ್ಸವ, ಮಧ್ಯಾಹ್ನ ಮಹಾಪ್ರಸಾದ, ಗಣ್ಯರಿಗೆ ಸತ್ಕಾರ ಕಾರ್ಯಕ್ರಮ ನಡೆಯಿತು. ಹಿರಿಯರಾದ ಸಿ.ಬಿ. ಜಕ್ಕನ್ನವರ, ಶಿವಾನoದ ನಿಲ್ಲಪ್ಪನ್ನವರ, ಮಹದೇವ ಸಿoಗಾರಿ, ನಾಗಪ್ಪ ಜಕ್ಕಾನಟ್ಟಿ, ಪಕ್ಕಿರಪ್ಪಾ ಕರೆನ್ನವರ, ವೀರಭದ್ರ ಚಚಡಿ, ಚಿದಾನಂದ ಪೂಜೇರಿ, ಸಿದ್ರಾಮಪ್ಪಾ ಸೂರಪ್ಪನ್ನವರ, ರಾಜು ಮತವಾಡ, ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT