ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಕ್ಕೇರಿ: ₹3 ಕೋಟಿ ವೆಚ್ಚದ ದೇವಸ್ಥಾನದ ದ್ವಾರಗೋಪುರ ಕಾಮಗಾರಿಗೆ ಚಾಲನೆ

Published : 24 ಆಗಸ್ಟ್ 2024, 13:38 IST
Last Updated : 24 ಆಗಸ್ಟ್ 2024, 13:38 IST
ಫಾಲೋ ಮಾಡಿ
Comments

ಹುಕ್ಕೇರಿ: ತಾಲ್ಲೂಕಿನ ಬೆಳವಿ ಗ್ರಾಮದ ಆರಾಧ್ಯ ದೇವತೆ ಗುಡ್ಡದಮ್ಮ ದೇವಿ ದ್ವಾರ ಗೋಪುರ ಹಾಗೂ ಪರಮೇಶ್ವರ ದೇವಸ್ಥಾನದ ₹3 ಕೋಟಿ ವೆಚ್ಚದ ಕಟ್ಟಡ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಲಾಯಿತು.

ಗುಡ್ಡದ ಗುಡ್ಡದಮ್ಮ ದೇವಸ್ಥಾನದ ದ್ವಾರಗೋಪುರಕ್ಕೆ ₹1.10 ಕೋಟಿ ವೆಚ್ಚದಲ್ಲಿ ನೂತನ ನಿರ್ಮಾಣಕ್ಕೆ ಅಡಿಪಾಯ ಹಾಕಲಾಯಿತು. ಪರಮೇಶ್ವರ ದೇವಸ್ಥಾನದ ನೂತನ ಕಟ್ಟಡದ ₹1.90 ಕೋಟಿ ವೆಚ್ಚದ ಮರು ಜೀರ್ಣೋದ್ಧಾರಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು.

ಚಿಕ್ಕೋಡಿ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸದಾಶಿವ ಸ್ವಾಮಿ ಹಾಗೂ ಬಸಯ್ಯ ಸ್ವಾಮಿ, ನಿಂಗಪ್ಪ ಪೂಜೇರಿ ಪೂಜಾ ಕಾರ್ಯಕ್ರಮ ನಡೆಸಿಕೊಟ್ಟರು. ಗುಡ್ಡದವ್ವ ದೇವಸ್ಥಾನದಲ್ಲಿ ಪಲ್ಲಕ್ಕಿ ಉತ್ಸವ, ಹಾಗೂ ಪರಮೇಶ್ವರ ದೇವಸ್ಥಾನದಲ್ಲಿ ವಿಶೇಷ ಅಭಿಷೇಕ ನಡೆಯಿತು. ಇದೆ ಸಂದರ್ಭದಲ್ಲಿ ಮಹಿಳೆಯರಿಗೆ ಉಡಿ ತುಂಬಲಾಯಿತು. ಎರಡೂ ದೇವಸ್ಥಾನಗಳ ಟ್ರಸ್ಟ್ ಕಮಿಟಿ ಸದಸ್ಯರು, ಭಕ್ತರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT