ಭಾನುವಾರ, ಮೇ 22, 2022
25 °C

‘ಅವಿಭಕ್ತ ಕುಟುಂಬಕ್ಕೆ ಮಾದರಿಯಾದ ಪಾಟೀಲ ಸಹೋದರರು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಐಗಳಿ: ‘ಇಂದಿನ ದಿನಗಳಲ್ಲಿ ಅವಿಭಕ್ತ ಕುಟುಂಬಗಳು ಇರುವುದು ವಿರಳ. ಈ ನಿಟ್ಟಿನಲ್ಲಿ ಗ್ರಾಮದ ಪಾಟೀಲ ಸಹೋದರರು ಮಾದರಿಯಾಗಿದ್ದಾರೆ’ ಎಂದು ಅಥಣಿಯ ವಿಮೋಚನಾ ಸಂಸ್ಥೆಯ ಅಧ್ಯಕ್ಷ ಬಿ.ಎಲ್.ಪಾಟೀಲ ಹೇಳಿದರು.

ಇಲ್ಲಿನ ಪಾಟೀಲ ಸಹೋದರರು ಕೊಡಮಾಡುವ 2022ನೇ ಸಾಲಿನ ‘ಗುರುಶ್ರೀ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

‘ನಮ್ಮ ಸಂಸ್ಥೆಯಲ್ಲಿ ಸದ್ಯ 1,500 ವಿದ್ಯಾರ್ಥಿಗಳು ಇದ್ದಾರೆ. ನನಗೆ ಪ್ರೇರಣೆ ನೀಡಿದ ಇಳಕಲ್‌ನ ಲಿಂ. ಮಹಾಂತನಪ್ಪ ಹಾಗೂ ಗದುಗಿನ ಶ್ರೀಗಳು, ಬಳಿಕ ಅಂದಿನ ಶಾಸಕ ಶಹಜಹಾನ ಡೊಂಗರಗಾಂವ ಸಂಸ್ಥೆಯ ಅಭಿವೃದ್ಧಿಗೆ ಸಹಕರಿಸಿದರು. ಆರೋಗ್ಯ ಇಲಾಖೆಯವರು ನಮ್ಮ ಸಂಸ್ಥೆಯ ಬಹಳಷ್ಟು ವಿದ್ಯಾರ್ಥಿನಿಯರನ್ನು ನರ್ಸಿಂಗ್ ಕೆಲಸಕ್ಕೆ ನೇಮಿಸಿಕೊಂಡರು. ಇದೆಲ್ಲವನ್ನೂ ಮರೆಯಲಾಗದು’ ಎಂದು ತಿಳಿಸಿದರು.

ಕಾಂಗ್ರೆಸ್ ಮುಖಂಡ ಶಹಜಹಾನ ಡೊಂಗರಗಾಂವ, ‘ದೇವದಾಸಿಯಾಗಿದ್ದವರ ಮಕ್ಕಳನ್ನು ದತ್ತು ಪಡೆದು ಅವರಿಗೆ ಶಿಕ್ಷಣ ನೀಡಿ ಸರ್ಕಾರಿ ಸೇವೆಗೆ ಸೇರುವಂತೆ ಮಾಡಿದ ಪಾಟೀಲರ ಕಾರ್ಯ ದೊಡ್ಡದು’ ಎಂದರು.

ಶಿಕ್ಷಕ ನಿಂಗನಗೌಡ ಪಾಟೀಲ ಮಾತನಾಡಿದರು. ಕನ್ನಾಳ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಶ್ಯಾಮು ತೆಲಸಂಗ, ಶಿದಗೌಡ ಪಾಟೀಲ, ಸಿಪಿಐ ಮಲ್ಲಿಕಾರ್ಜುನ ಸಿಂಧೂರ, ಹಣಮಂತ ಕರಿಗಾರ, ಡಾ.ಬಿ.ಜಿ. ಪಾಟೀಲ, ಡಾ.ಚನಗೌಡ ಪಾಟೀಲ, ಡಾ.ಈರಗೌಡ ಪಾಟೀಲ, ಮುರುಘೇಂದ್ರ ಬ್ಯಾಂಕ್‌ ನಿರ್ದೇಶಕ ರುದ್ರಯ್ಯ ಹಿರೇಮಠ, ಶಿಕ್ಷಕ ಎಸ್.ಸಿ. ಹಡಪದ, ಎಸ್.ಎಂ. ಜನಗೌಡರ, ಜಗದೀಶ ಕೊರಬು, ಮಹಾಬಲ್ ಮಾಕಾಣಿ, ಶಿವಾನಂದ ಸಿಂದೂರ, ರುದ್ರಗೌಡ ಪಾಟೀಲ ಇದ್ದರು.

ಕೆ.ಎಸ್. ಬಿರಾದಾರ ಸ್ವಾಗತಿಸಿದರು. ಮಲಗೌಡ ಪಾಟೀಲ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು