ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿಯಲ್ಲಿ ಹಾಫ್‌ ಮ್ಯಾರಥಾನ್‌: 3,500 ಜನ ಭಾಗಿ

ಹಿರಿಯ ಕ್ರಿಕೆಟಿಗರಾದ ವೆಂಕಟೇಶ ಪ್ರಸಾದ, ಸುನೀಲ ಜೋಶಿ ಚಾಲನೆ
Last Updated 29 ಸೆಪ್ಟೆಂಬರ್ 2019, 14:50 IST
ಅಕ್ಷರ ಗಾತ್ರ

ಬೆಳಗಾವಿ: ನಗರದ ಸಿ.ಪಿ.ಇಡಿ ಮೈದಾನದಲ್ಲಿ ಸ್ಥಳೀಯ ಲೇಕ್‌ವ್ಯೂವ್‌ ಫೌಂಡೇಷನ್‌ ಮತ್ತು ರೋಟರಿ ಕ್ಲಬ್ ಆಫ್ ವೇಣುಗ್ರಾಮ ಸಹಯೋಗದಲ್ಲಿ ಭಾನುವಾರಹಾಫ್ಮ್ಯಾರಥಾನ್ ಜರುಗಿತು.

5, 10 ಹಾಗೂ 21 ಕಿ.ಮೀ. ವಿಭಾಗಗಲ್ಲಿ ಸ್ಪರ್ಧೆ ನಡೆಯಿತು. 21 ಕಿ.ಮೀ. ಮ್ಯಾರಥಾನ್‌ಗೆ ಇಲ್ಲಿನ ಮರಾಠಾ ಲಘು ಪದಾತಿ ದಳದ (ಎಂಎಲ್‌ಐಆರ್‌ಸಿ) ಮೇಜರ್‌ ಜನರಲ್ ಅಲೋಕ ಕಕ್ಕರ್‌ ಚಾಲನೆ ನೀಡಿದರು.

ಹಿರಿಯ ಕ್ರಿಕೆಟಿಗರಾದವೆಂಕಟೇಶ ಪ್ರಸಾದ್‌ ಹಾಗೂ ಸುನೀಲ ಜೋಶಿಅವರು 5 ಕಿ.ಮೀ. ಓಟಕ್ಕೆಬಾವುಟ ತೋರಿಸಿ, ಸ್ಪರ್ಧಿಗಳನ್ನು ಹುರಿದುಂಬಿಸಿದರು.

ಎಂಎಲ್‌ಐಆರ್‌ಸಿ ಕಮಾಂಡೊ, ಏರಫೋರ್ಸ್‌ ಮತ್ತು ಪೊಲೀಸರಿಗಾಗಿ ಪ್ರತ್ಯೇಕವಾಗಿ 21 ಕಿ.ಮೀ. ಮ್ಯಾರಥಾನ್ ಜರುಗಿತು. ಪ್ರಾಥಮಿಕ ಶಾಲೆಗಳ ಮಕ್ಕಳು ಹಾಗೂ ಹಿರಿಯ ನಾಗರಿಕರಿಗಾಗಿ 21 ಕಿ.ಮೀ. ‘ಫನ್‌–ರನ್‌’ ಮ್ಯಾರಥಾನ್‌ ನಡೆಯಿತು.

ಅಂಧ ಮಕ್ಕಳು ಭಾಗಿ:ಮ್ಯಾರಥಾನ್‌ನಲ್ಲಿ ಒಟ್ಟು 3,500ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ನಗರ ಹಾಗೂ ಸುತ್ತಲಿನ ಗ್ರಾಮಗಳ 28 ಸರ್ಕಾರಿ ಶಾಲೆಗಳ 1,250 ಮಕ್ಕಳಿಗೆ ಉಚಿತ ಪ್ರವೇಶ ನೀಡಲಾಗಿತ್ತು. ಇಲ್ಲಿನ ಮಹೇಶ್ವರಿ ಅಂಧ ಮಕ್ಕಳ ಶಾಲೆಯ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು 5 ಕಿ.ಮೀ. ಓಟದಲ್ಲಿ ಸ್ಪರ್ಧಿಸಿದ್ದು ವಿಶೇಷವಾಗಿತ್ತು.

ನಗರ ಪೊಲೀಸ್ ಆಯುಕ್ತ ಬಿ.ಎಸ್‌. ಲೋಕೇಶಕುಮಾರ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ವಿ.ರಾಜೇಂದ್ರ, ಲೇಕ್‌ವ್ಯೂವ್‌ ಫೌಂಡೇಷನ್‌ ಅಧ್ಯಕ್ಷ ಡಾ.ಶಶಿಕಾಂತ ಕುಲಗೋಡ, ಸಂಘಟಕ ವಿನಯ ಬಾಳಿಕಾಯಿ, ರೋಟರಿ ಕ್ಲಬ್ ಆಫ್ ವೇಣುಗ್ರಾಮ ಅಧ್ಯಕ್ಷ ರಾಜೇಶಕುಮಾರ ತಳೇಗಾಂವ,ಆಸೀಫ್ ಖೋಜಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT