ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥಣಿ: ಸಿಡಿಲು ಬಡಿದು ಇಬ್ಬರ ಸಾವು

Published 30 ಮೇ 2023, 15:24 IST
Last Updated 30 ಮೇ 2023, 15:24 IST
ಅಕ್ಷರ ಗಾತ್ರ

ಅಥಣಿ (ಬೆಳಗಾವಿ): ತಾಲ್ಲೂಕಿನ ಎರಡು ಕಡೆ ಮಂಗಳವಾರ ಸಂಜೆ ಸಿಡಿಲೆರಗಿ ಒಬ್ಬ ಯುವಕ ಹಾಗೂ ಒಬ್ಬ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕಕಮರಿಯ ಅಮೂಲ್‌ ಜೈಸಿಂಗ್‌ (24) ಹಾಗೂ ದೇಸರಹಟ್ಟಿಯ ವಿಠ್ಠಾಬಾಯಿ ಕಮಕಾರ (50) ಮೃತಪಟ್ಟವರು.

ಅಮೂಲ್ ಅವರು ಎಂದಿನಂತೆ ಮಂಗಳವಾರ ಕೂಡ ಕುರಿ ಕಾಯುತ್ತಿದ್ದರು. ಏಕಾಏಕಿ ಮಳೆ, ಬಿರುಗಾಳಿ ಆರಂಭವಾಯಿತು. ಆಗ ಅಮೂಲ್‌ ಮರದಡಿ ಹೋಗಿ ನಿಂತರು. ನೇರವಾಗಿ ಅವರಿಗೆ ಸಿಡಿಲೆರಗಿ, ಸ್ಥಳದಲ್ಲೇ ಅಸುನೀಗಿದರು.

ವಿಠ್ಠಾಬಾಯಿ ಕೂಡ ತಮ್ಮ ಹೊಲದಲ್ಲಿ ಅರಿಸಿನ ಫಸಲು ಸಂಸ್ಕರಣೆ ಮಾಡುತ್ತಿದ್ದ ವೇಳೆ ಸಿಡಿಲೆರಗಿತು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT