ಮಂಗಳವಾರ, ಜನವರಿ 19, 2021
18 °C

ಲಕ್ಷ್ಮಿ ಹೆಬ್ಬಾಳಕರ ಯಾರೆಂದು ಗೊತ್ತಿಲ್ಲ: ರಮೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಲಕ್ಷ್ಮಿ ಹೆಬ್ಬಾಳಕರ ಯಾರೆನ್ನುವುದು ಗೊತ್ತಿಲ್ಲ. ಅವರ ಪರಿಚಯವಿಲ್ಲ’ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

‘ಬಿಜೆಪಿಯವರದು ಸುಳ್ಳು ಹೇಳುವ ಸಂಸ್ಕೃತಿ’ ಎಂಬ ಕಾಂಗ್ರೆಸ್‌ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹೇಳಿಕೆಗೆ ಮೇಲಿನಂತೆ ಅವರು ಪ್ರತಿಕ್ರಿಯಿಸಿದರು.

‘ವಂಚನೆ ಪ್ರಕರಣದಲ್ಲಿ ಬಂಧಿತನಾಗಿರುವ ಯುವರಾಜ್‌ (ಸ್ವಾಮಿ) ನನ್ನನ್ನೂ ಒಂದೆರಡು ಬಾರಿ ಭೇಟಿಯಾಗಿದ್ದ. ಆದರೆ, ಫೋಟೊ ತೆಗೆಸಿಕೊಂಡಿಲ್ಲ. ಉನ್ನತ  ಸ್ಥಾನದಲ್ಲಿರುತ್ತೇವೆ ಎಂದು ಹಲವರು ಬಂದು ಭೇಟಿಯಾಗುತ್ತಾರೆ. ಫೋಟೊ ತೆಗೆಸಿಕೊಳ್ಳುತ್ತಾರೆ. ಹಾಗೆಂದ ಮಾತ್ರಕ್ಕೆ ಮಂತ್ರಿಗಳೆಲ್ಲರೂ ಆರೋಪಿಗಳು ಎಂದು ಮಾಧ್ಯಮದಲ್ಲಿ ಬಿಂಬಿಸುವುದು ತ‍ಪ್ಪು’ ಎಂದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು