ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಅಂತರರಾಷ್ಟ್ರೀಯ ಗಾಳಿಪಟ ಉತ್ಸವ ಜ. 20ರಿಂದ–ಶಾಸಕ ಅಭಯ ಪಾಟೀಲ

Published 18 ಜನವರಿ 2024, 13:24 IST
Last Updated 18 ಜನವರಿ 2024, 13:24 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಜ.20ರಿಂದ 23ರವರೆಗೆ ನಗರದ ಬಿ.ಎಸ್‌.ಯಡಿಯೂರಪ್ಪ ಮಾರ್ಗದಲ್ಲಿರುವ ಮಾಲಿನಿ ಸಿಟಿಯಲ್ಲಿ 14ನೇ ಆವೃತ್ತಿಯ ಅಂತರರಾಷ್ಟ್ರೀಯ ಗಾಳಿಪಟ ಉತ್ಸವ ನಡೆಯಲಿದೆ.

‘ಈ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಮತ್ತು ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ದೃಷ್ಟಿಯಿಂದ ಗಾಳಿಪಟ ಉತ್ಸವ ಆಯೋಜಿಸಲಾಗುತ್ತಿದೆ. ನಾಲ್ಕು ದಿನಗಳ ಈ ಉತ್ಸವದಲ್ಲಿ ಉಮಂಗ್‌ ಯುವಜನೋತ್ಸವ, ಬಲೂನ್‌ ಉತ್ಸವ, ದೇಹದಾರ್ಢ್ಯ ಸ್ಪರ್ಧೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ’ ಎಂದು ಅಭಯ ಪಾಟೀಲ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಬ್ರಿಟನ್‌, ಇಂಡೋನೆಷ್ಯಾ, ಸ್ಲೋವೆನಿಯಾ, ನೆದರ್‌ಲೆಂಡ್‌ನ 6 ಮಂದಿ ಆಟಗಾರರು, ಕರ್ನಾಟಕ, ಒಡಿಶಾ, ಪಂಜಾಬ್‌, ಮಹಾರಾಷ್ಟ್ರ ಮತ್ತಿತರ ರಾಜ್ಯಗಳ 37 ಆಟಗಾರರು ಗಾಳಿಪಟ ಹಾರಿಸಲಿದ್ದಾರೆ. ಅಯೋಧ್ಯೆಯಲ್ಲಿ ಜ. 22ರಂದು ಹೊಸ ರಾಮ ಮಂದಿರ ಉದ್ಘಾಟನೆಯಾಗಲಿದೆ. ಹಾಗಾಗಿ ರಾಮನ ಚಿತ್ರ ಒಳಗೊಂಡ ಕೆಲವು ಗಾಳಿಪಟಗಳನ್ನು ಹಾರಿಸಲು ಯೋಜಿಸಲಾಗಿದೆ’ ಎಂದರು.

‘ಜ.20ರಂದು ಬೆಳಿಗ್ಗೆ 10ಕ್ಕೆ ಗಾಳಿಪಟ ಉತ್ಸವ ಉದ್ಘಾಟನೆಗೊಳ್ಳಲಿದೆ. ಸಂಜೆ 4.45ಕ್ಕೆ 1ರಿಂದ 3ನೇ ತರಗತಿ ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ಧೆ, 5 ಗಂಟೆಗೆ ಮಕ್ಕಳ ಉತ್ಸವ, 7ಕ್ಕೆ ಡಿ.ಜೆ. ನೈಟ್‌ ಕಾರ್ಯಕ್ರಮ ನಡೆಯಲಿದೆ. 21ರಂದು ಬೆಳಿಗ್ಗೆ 10.30ಕ್ಕೆ ಉಮಂಗ್‌ ಯುವಜನೋತ್ಸವ, 5.30ಕ್ಕೆ ಗಾಳಿಪಟ ಉತ್ಸವದ ಸಮಾರೋಪ ನಡೆಯಲಿದೆ. 22ರಂದು ಸಂಜೆ 5ಕ್ಕೆ ಬಲೂನ್‌ ಉತ್ಸವ, 6ಕ್ಕೆ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ, ರಾತ್ರಿ 9ಕ್ಕೆ ಕ್ರ್ಯಾಕರ್‌ ಷೋ ನಡೆಯಲಿದೆ’ ಎಂದರು.

‘ಜ. 23ರಂದು ಸಂಜೆ 5ಕ್ಕೆ ದೇಹದಾರ್ಢ್ಯ ಸ್ಪರ್ಧೆ, 7 ಗಂಟೆಗೆ ಫ್ಯಾಷನ್‌ ಶೋ, ರಾತ್ರಿ 9ಕ್ಕೆ ಪ್ರಶಸ್ತಿ ವಿತರಣೆ ಕಾರ್ಯಕ್ರಮ ನಡೆಯಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT