ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಜಗತ್ತಿಗೆ ಅಹಿಂಸಾ ತತ್ವ ಬೋಧಿಸಿದ ಜೈನ ಧರ್ಮ: ರಾಜ್ಯಪಾಲ ಗೆಹಲೋತ್

Published : 8 ಜೂನ್ 2025, 15:54 IST
Last Updated : 8 ಜೂನ್ 2025, 15:54 IST
ಫಾಲೋ ಮಾಡಿ
0
ಜಗತ್ತಿಗೆ ಅಹಿಂಸಾ ತತ್ವ ಬೋಧಿಸಿದ ಜೈನ ಧರ್ಮ: ರಾಜ್ಯಪಾಲ ಗೆಹಲೋತ್

ಕಾಗವಾಡ: ‘ಜಗತ್ತಿಗೆ ಶಾಂತಿ ಮತ್ತು ಅಹಿಂಸಾ ತತ್ವ ಬೋಧಿಸಿದ ಜೈನ ಧರ್ಮ ರಾಷ್ಟ್ರ ನಿರ್ಮಾಣ ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ’ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಶ್ಲಾಘಿಸಿದರು.

ADVERTISEMENT
ADVERTISEMENT

ತಾಲ್ಲೂಕಿನ ಐನಾಪುರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಖಿಲ ಭಾರತ ಭಟ್ಟಾರಕ ಸಮ್ಮೇಳನ ಹಾಗೂ ಜೈನ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಜೈನ ಧರ್ಮ ಪ್ರಾಚೀನ ಕಾಲದಿಂದಲೂ ಶ್ರಮಣ ಪರಂಪರೆಯಿಂದ ನಡೆದುಕೊಂಡು ಬಂದಿದೆ. ಸಮುದಾಯದ ಜನರೆಲ್ಲ ಸೇರಿಕೊಂಡು ಸಮಾವೇಶ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಸರ್ಕಾರ ನಿಮ್ಮ ಬೇಡಿಕೆ ಈಡೇರಿಸುವ ಕೆಲಸ ಮಾಡಬೇಕು. ಹೋರಾಟದಲ್ಲಿ ನಾನೂ ನಿಮ್ಮ ಜತೆಯಾಗಿ ನಿಲ್ಲುವೆ’ ಎಂದು ಭರವಸೆ ನೀಡಿದರು.

ಶಾಸಕ ಲಕ್ಷ್ಮಣ ಸವದಿ, ‘ಜೈನ ಸಮುದಾಯದ ಋಣ ನಮ್ಮ ಮೇಲೆ ಬಹಳಷ್ಟಿದೆ. ವೈಯಕ್ತಿಕವಾಗಿ ನಾನು ಮತ್ತು ನಮ್ಮ ಪಕ್ಷದವರು ಅದನ್ನು ತೀರಿಸುವ ಕೆಲಸ ಮಾಡುತ್ತೇವೆ’ ಎಂದು ಆಶ್ವಾಸನೆ ನೀಡಿದರು.

ADVERTISEMENT

‘ಕಾಗವಾಡ ತಾಲ್ಲೂಕಿನ ಶೇಡಬಾಳದ ವಿದ್ಯಾನಂದ ಮುನಿ ಮಹಾರಾಜರು ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಹಸ್ತದ ಚಿಹ್ನೆ ನೀಡಿದರು. ನಮ್ಮ ಪಕ್ಷದ ಮೇಲೆ ಅವರ ಆಶೀರ್ವಾದ ಸದಾ ಇದೆ. ಮುಂಬರುವ ದಿನಗಳಲ್ಲಿ ನಿಮ್ಮ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸುವುದು ಶತಸಿದ್ಧ’ ಎಂದರು.

ಮಾಜಿ ಸಚಿವ ಶ್ರೀಮಂತ ಪಾಟೀಲ, ‘ಈ ಹಿಂದೆ ನಾನು ಅಲ್ಪಸಂಖ್ಯಾತ ಕಲ್ಯಾಣ ಸಚಿವನಿದ್ದಾಗ, ಹಾಸನ ಜಿಲ್ಲೆಯ ಶ್ರವಣಬೆಳಗೊಳದ ಅಭಿವೃದ್ಧಿಗೆ ₹50 ಕೋಟಿ ಅನುದಾನ ಮಂಜೂರು ಮಾಡಿದ್ದೆ. ಸಚಿವ ಸ್ಥಾನದಿಂದ ಕೆಳಗೆ ಇಳಿಯುವಾಗ, ಅದರಲ್ಲಿ ₹10 ಕೋಟಿ ಬಿಡುಗಡೆ ಮಾಡಿದ್ದೆ. ಅಲ್ಲದೆ, ಜೈನ ಬಸದಿಗಳಿಗೆ ಸಾಕಷ್ಟು ಅನುದಾನ ನೀಡಿದ್ದೆ. ಈಗ ಬೃಹತ್‌ ಪ್ರಮಾಣದಲ್ಲಿ ಸಮಾವೇಶ ನಡೆಸಿ, ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸುತ್ತಿದ್ದೀರಿ. ಸರ್ಕಾರ ನಿಮಗೆ ಸ್ಪಂದಿಸಬೇಕು’ ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಜೈನ ಸಾಧು–ಸಂತರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿವೆ. ಸರ್ಕಾರ ಅವರಿಗೆ ರಕ್ಷಣೆ ನೀಡಬೇಕು.
– ಗುಣಧರನಂಧಿ ಮಹಾರಾಜರು

ಮಾಜಿ ಶಾಸಕ ಸಂಜಯ ಪಾಟೀಲ, ‘ಸರ್ಕಾರ ನಡೆದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ(ಜಾತಿ ಗಣತಿ)ಯಲ್ಲಿ ಜೈನ ಸಮುದಾಯದ ಜನಸಂಖ್ಯೆ 1.5 ಲಕ್ಷ ಇದೆ ಎಂದು ಸರ್ಕಾರ ತಿಳಿಸಿದೆ. ಆದರೆ, ಚಿಕ್ಕೋಡಿ ಲೋಕಸಭಾ ಕ್ಷೇತ್ರವೊಂದರಲ್ಲೇ 6 ಲಕ್ಷ ಜೈನರಿದ್ದಾರೆ. ಹಾಗಾಗಿ ಕಾಂಗ್ರೆಸ್‌ ಕ್ಯಾಲ್ಕ್ಯುಲೇಟರ್‌ಗೆ ಬೆಂಕಿ ಹಚ್ಚಬೇಕಿದೆ’ ಎಂದು ಕಿಡಿಕಾರಿದರು.

ಶಾಸಕರಾದ ರಾಜು ಕಾಗೆ, ಗಣೇಶ ಹುಕ್ಕೇರಿ, ಅಭಯ ಪಾಟೀಲ, ದುರ್ಯೋಧನ ಐಹೊಳೆ, ಮಾಜಿ ಸಚಿವ ವೀರಕುಮಾರ ಪಾಟೀಲ, ಮುಖಂಡರಾದ ಉತ್ತಮ ಪಾಟೀಲ, ಆನಂದ ನ್ಯಾಮಗೌಡ, ಅರುಣ ಯಲಗುದ್ರಿ, ರಾಜು ನಾಡಗೌಡರ, ಶೀತಲ್‌ ಪಾಟೀಲ, ಡಿ.ಟಿ.ಮೇಕನಮರಡಿ, ಸಂಜಯ ಕೂಚನೂರೆ, ದಾದಾ ಪಾಟೀಲ, ಸುನೀಲ ಪಾಟೀಲ ಇದ್ದರು.

ಸಮಾವೇಶದ ಪ್ರಯುಕ್ತ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಯಿತು. ಸಾವಿರಾರು ಜನರು ಉತ್ಸಾಹದಿಂದ ಹೆಜ್ಜೆಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
Comments0