ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಭಿವೃದ್ಧಿಪರ ವಿಚಾರಗಳಿಗೆ ಒತ್ತು ನೀಡಿ’

Last Updated 31 ಜುಲೈ 2021, 16:17 IST
ಅಕ್ಷರ ಗಾತ್ರ

ಕೋ.ಶಿವಾಪೂರ: ‘ತಂತ್ರಜ್ಞಾನ ಬೆಳವಣಿಗೆಯಿಂದಾಗಿ ಮಾಧ್ಯಮ ಕ್ಷೇತ್ರ ಪ್ರಬುದ್ಧತೆಯನ್ನು ಹೊಂದಿದೆ. ಪತ್ರಕರ್ತರು ಅಭಿವೃದ್ಧಿ ಪರ ವಿಚಾರಗಳಿಗೆ ಒತ್ತು ನೀಡಬೇಕು’ ಎಂದು ಭಾಗೋಜಿಕೊಪ್ಪದ ಶಿವಯೋಗಿಶ್ವರ ಹಿರೇಮಠದ ಮುರಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಸಭಾಭವನದಲ್ಲಿ ಈಚೆಗೆ ಕರ್ನಾಟಕ ಪತ್ರಕರ್ತರ ಸಂಘ ಯರಗಟ್ಟಿ ತಾಲ್ಲೂಕು ಘಟಕದಿಂದ ಈಚೆಗೆ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‌ಅಬಕಾರಿ ಅಧಿಕಾರಿಯಾದ ಶ್ರೀಶೈಲ ಅಕ್ಕಿ, ‘ಪತ್ರಕರ್ತರು ಕೊರೊನಾದಂತಹ ಕಠಿಣ ಸಂದರ್ಭ, ಮಳೆ, ಚಳಿ, ಗಾಳಿ ಲೆಕ್ಕಿಸದೆ ಕೆಲಸ ಮಾಡುತ್ತಾರೆ’ ಎಂದರು.

ಯರಗಟ್ಟಿಯ ರಾಜರಾಜೇಶ್ವರಿ ಆಶ್ರಮದ ಗಣಪತಿ ಮಹಾರಾಜ, ‘ಪತ್ರಕರ್ತರು ಗ್ರಾಮಗಳಲ್ಲಿನ ಮೂಲ ಸೌಲಭ್ಯ ಕೊರತೆಗಳ ಬಗ್ಗೆ ಬೆಳಕು ಚೆಲ್ಲಬೇಕು’ ಎಂದು ಸಲಹೆ ನೀಡಿದರು.

ಪತ್ರಕರ್ತರ ಸಂಘದ ಅಧ್ಯಕ್ಷ ಮುರುಗೇಶ ಶಿವಪೂಜಿ ಉದ್ಘಾಟಿಸಿ ಮಾತನಾಡಿದರು. ರಾಮಕೃಷ್ಣ ಪಾನಬುಡೆ ಉಪನ್ಯಾಸ ನೀಡಿದರು. ಎಂ.ಎಂ. ವಿರಕ್ತಮಠ, ಪ್ರಾಚಾರ್ಯ ಎಂ.ವಿ. ಕುಂಬಾರ, ಸವದತ್ತಿ ತಹಶೀಲ್ದಾರ್‌ ಪ್ರಶಾಂತ ಪಾಟೀಲ, ಪಿಎಸ್‌ಐ ಪ್ರವೀಣ ಗಂಗೋಳ್ಳಿ, ಸಮಾಜಕಲ್ಯಾಣ ಇಲಾಖೆಯ ಆರ್.ಆರ್. ಕುಲಕರ್ಣಿ, ಬಸವರಾಜ ಪುಟ್ಟಿ, ಯರಗಟ್ಟಿ ತಹಶೀಲ್ದಾರ್‌ ಎಂ.ಎನ್. ಮಠದ, ಲೋಕೋಪಯೋಗಿ ಇಲಾಖೆ ಅಧಿಕಾರಿ ಎಚ್.ಎ. ಕದ್ರಾಪೂರ, ಸಂಘದ ಯರಗಟ್ಟಿ ತಾಲ್ಲೂಕು ಘಟಕದ ಅಧ್ಯಕ್ಷ ಫಿರೋಜಿ ಖಾದ್ರಿ, ಶಶಿಧರ ಎಂ ಪಾಟೀಲ ಇದ್ದರು.

ಸೋಮು ಮಾಳಗಿ ನಿರೂಪಿಸಿದರು. ಹೇಮಂತ ಗೋಪಾಳಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT