ಬೆಳಗಾವಿ | ಕೆರೆಗಾಗಿ ಜೋತಿಬಾ ವಿನೂತನ ಹೋರಾಟ: ಸಿನಿಮಾಕ್ಕೆ ಪ್ರೇರಣೆ

ಬೆಳಗಾವಿ: ಊರಿನ ಕೆರೆಗೆ ಸರ್ಕಾರದಿಂದ ಜಾಗ ಮಂಜೂರಾಗುವವರೆಗೂ ಶರ್ಟ್ ಬದಲಾಯಿಸುವುದಿಲ್ಲ ಎಂದು ಶಪಥ ಮಾಡಿ ಮೂರು ವರ್ಷಗಳವರೆಗೆ ಹೋರಾಟ ಮಾಡಿದ್ದ ತಾಲ್ಲೂಕಿನ ಹಂದಿಗನೂರಿನ ಜೋತಿಬಾ ಮಾನವಾಡಕರ ಅವರ ಕಥೆ ಸಿನಿಮಾಕ್ಕೆ ಪ್ರೇರಣೆಯಾಗಿದೆ.
'ಪ್ರಜಾವಾಣಿ'ಯಲ್ಲಿ ಬುಧವಾರ ಪ್ರಕಟವಾಗಿದ್ದ ವಿಶೇಷ ವರದಿ ಗಮನಿಸಿದ ಚಲನಚಿತ್ರ ನಿರ್ದೇಶಕ ಬಾ.ಮಾ. ಹರೀಶ್ ಅವರು ಜೋತಿಬಾ ಕುರಿತು ಪತ್ರಿಕೆಯ ಪ್ರತಿನಿಧಿಯಿಂದ ಮಾಹಿತಿ ಪಡೆದರು.
'ಸಮಾಜದ ಮೇಲೆ ಪರಿಣಾಮ ಬೀರುವ ಹಾಗೂ ನಿಸ್ವಾರ್ಥ ಹೋರಾಟಗಾರನ ಕುರಿತು ಕಥೆ ಮಾಡುತ್ತಿದ್ದೆವು. ನಾವು ಯೋಚಿಸುತ್ತಿದ್ದ ಕಥಾವಸ್ತುವಿಗೆ ಜೋತಿಬಾ ಅವರ ಛಲದ ಹೋರಾಟ ಪ್ರೇರಣೆಯಾಗಿದೆ. ಅವರೊಂದಿಗೆ ಮಾತನಾಡಿ ಅವರ ಹೋರಾಟದ ಹಾದಿಯ ವಿಷಯವನ್ನೂ ಕಥೆಯಲ್ಲಿ ಸೇರಿಸಲು ಉದ್ದೇಶಿಸಿದ್ದೇನೆ. ಇಂತಹ ಹೋರಾಟಗಳು ಸಮಾಜಕ್ಕೆ ಹಾಗೂ ಗ್ರಾಮೀಣ ಜನರಿಗೆ ಸ್ಫೂರ್ತಿ ತುಂಬುತ್ತವೆ' ಎಂದು ಹೇಳಿದರು.
ಇದನ್ನೂ ಓದಿ: ಕೆರೆ ಜಾಗಕ್ಕಾಗಿ 3 ವರ್ಷ ಹೊಸ ಬಟ್ಟೆ ತೊಡಲಿಲ್ಲ!


ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.