ಕಂಕಣವಾಡಿ: ರಾಯಬಾಗ ತಾಲ್ಲೂಕಿನ ಕಂಕಣವಾಡಿ ಗಂಗಾಬಾವಿ ಕರೆಮ್ಮಾದೇವಿ ಜಾತ್ರೆಯ ಅಂಗವಾಗಿ ಪಟ್ಟಣದ ಜನರೆಲ್ಲ ಜಾತಿ, ಧರ್ಮ,ಮತದ ಹಂಗಿಲ್ಲದೇ ಇದೇ ಸೆ.15 (ಸೋಮವಾರ)ರಂದು ಭಕ್ತಿಭಾವದಲ್ಲಿ ಭಂಡಾರದ ಓಕುಳಿಯಲ್ಲಿ ದೇವಿಯ ಮೆರವಣಿಗೆ ಮಾಡಲು ಸಜ್ಜಾಗಿದ್ದಾರೆ.

ಸೆ. 12ರಿಂದ ವಿವಿಧ ವಿಧಿವಿದಾನಗಳೊಂದಿಗೆ ಜಾತ್ರೆಯು ಪ್ರಾರಂಭಗೊಂಡಿವೆ. ಪಟ್ಟಣವು ತಳಿರು ತೋರಣಗಳಿಂದ, ಸ್ವಾಗತ ಕಮಾನುಗಳಿಂದ ಕಳೆಕಟ್ಟಿದೆ. ಜಾತ್ರೆಯ ಅಂಗವಾಗಿ ವಿವಿಧ ಪಂದ್ಯಾಟಗಳು, ಶರತ್ತುಗಳು ಹಾಗೂ ರಸಮಂಜರಿ ಕಾರ್ಯಕ್ರಮಗಳನ್ನು ಆಯೋಜಸಲಾಗಿದೆ.

ದೇವಿ ಮಹಾತ್ಮೆ: ಶಕ್ತಿದೇವಿ ಸ್ವರೂಪಿಯಾಗಿರುವ ಗಂಗಾಬಾಂವಿ ಕರೆಮ್ಮಾದೇವಿಗೆ ಹಲವಾರು ದಶಕಗಳ ಪೂರ್ವ ಇತಿಹಾಸವಿದೆ. ಊರಿನ ಬಾವಿ ಪಕ್ಕದಲ್ಲಿರುವ ಗಿಡದ ಕೆಳಗೆ ಕಲ್ಲು ರೂಪದಲ್ಲಿ ಉದ್ಭವಿಸಿದ ಕರೆಮ್ಮದೇವಿಯನ್ನು ಪೂರ್ವಜರು ಭಕ್ತಿಭಾವದಲ್ಲಿ ದಿನನಿತ್ಯ ದೀಪ ಹಚ್ಚಿ ಪೂಜಿಸಿಕೊಂಡು ಬಂದಿದ್ದಾರೆ.

ಸೆ. 16ರಂದು ಬೆಳಿಗ್ಗಿನ 2ರಿಂದ ಸಹಸ್ರ ಸಂಖ್ಯೆಯಲ್ಲಿ ದೀರ್ಘದಂಡ ನಮಸ್ಕಾರದ ಹರಕೆ ತೀರಿಸುವರು. ಸೆ.15ರಂದು ಬೆಳಿಗ್ಗೆ ದೇವಿಗೆ ಅಭಿಷೇಕ, ವಿಶೇಷ ಪೂಜೆ ಜರುಗಿದ ನಂತರ ಉಡಿ ತುಂಬುವರು. ಮಧ್ಯಾಹ್ನ 12ರಿಂದ ದೇವಿ ಸನ್ನಿಧಿಯಿಂದ ವಿವಿಧ ವಾದ್ಯಗಳೊಂದಿಗೆ ಪ್ರಾರಂಭಗೊಳ್ಳುವ ದೇವಿ ಮೆರವಣಿಗೆಯು ಪಟ್ಟಣದ ತುಂಬೆಲ್ಲ ಸಾಗಿ ಮರಳಿ ಮೂಲ ಸನ್ನಿಧಿಗೆ ಬರುವುದು. ಜಾತ್ರೆಯ ಅಂಗವಾಗಿ ಐದು ದಿನ ಅನ್ನಸಂತರ್ಪಣೆ ಜರುಗುವುದು.

ಉದ್ಘಾಟನೆ: ಜಾತ್ರೆ ಉದ್ಘಾಟನೆಯಲ್ಲಿ ಪ್ರತಾಪರಾವ ಪಾಟೀಲ, ವಿವೇಕರಾವ ಪಾಟೀಲ, ಶಿವರಾಜ ಪ್ರ. ಪಾಟೀಲ, ಪ್ರಣಯ ವಿ. ಪಾಟೀಲ, ಅಣ್ಣಾಸಾಹೇಬ ದೇಸಾಯಿ, ಶಂಕರರಾವ ದೇಸಾಯಿ, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಪ್ರಕಾಶ ಹುಕ್ಕೇರಿ, ದೇವಸ್ಥಾನ ಕಮಿಟಿ ಅಧ್ಯಕ್ಷ ಸೂರ್ಯಕಾಂತ ದೇಸಾಯಿ ಭಾಗವಹಿಸುವರು.

ಷರತ್ತುಗಳು: ಜಾತ್ರೆ ಅಂಗವಾಗಿ ಹಲವು ಶರ್ತುಗಳನ್ನು ಏರ್ಪಡಿಸಿರುವರು. ಸೆ.14 ಪುರುಷರ ಓಡುವ ಸ್ಪರ್ಧೆ, ಕುದರೆ ಸವಾರಿ ಶರ್ತು, ಹಲ್ಲು ಹಚ್ಚದ ಹೋರಿ ಮತ್ತು ಕುದರೆ ಶರ್ತು, ನವತರ ಶರ್ತು, ಎಕ್ಕಾ ಗಾಡಿ ಕುದರೆ ಶರ್ತು, ಒಂದು ಎತ್ತು, ಒಂದು ಕುದರೆ ಶರ್ತು, ಕುದರೆ ಶರತ್ತು, ಜೋಡೆತ್ತಿನ ಗಾಡಿ ಶರ್ತು ಟಗರಿನ ಕಾದಾಟ: ಸೆ. 13ರಂದು ಮಧ್ಯಾಹ್ನ 3ಕ್ಕೆ ಟಗರಿನ ಕಾದಾಟ, ಸೆ. 15ರಂದು ರಾತ್ರಿ 9ಕ್ಕೆ ರಸಮಂಜರಿ, ಸೆ. 16ರಂದು ರಾತ್ರಿ 8ಕ್ಕೆ ಡೊಳ್ಳಿನ ಪದಗಳು ಇರುವವು ಎಂದು ದೇವಸ್ಥಾನ ಕಮಿಟಿ ಅಧ್ಯಕ್ಷ ಸೂರ್ಯಕಾಂತ ದೇಸಾಯಿ ’ಪ್ರಜಾವಾಣಿ’ ಗೆ ಪ್ರತಿಕ್ರಿಯಿಸಿದರು.

‘ಕಂಕಣವಾಡಿಯ ಗಂಗಾಬಾವಿ ಕರೆಮ್ಮಾದೇವಿ ಜಾತ್ರೆಯು ಪ್ರತಾಪಅಣ್ಣಾ ಪಾಟೀಲ ಅವರ ಮಾರ್ಗದರ್ಶನದಿಂದಾಗಿ ಸಂಭ್ರಮದಿಂದ ಯಶಸ್ಸಿಯಾಗಿ ನಡೆದುಕೊಂಡು ಬಂದಿದೆ’
ಪ್ರಕಾಶ ಹುಕ್ಕೇರಿ, ಅಧ್ಯಕ್ಷ, ಕಂಕಣವಾಡಿ ಪಟ್ಟಣ ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.