ಶುಕ್ರವಾರ, ಮೇ 27, 2022
21 °C

ಎಷ್ಟು ಶಾಸಕರನ್ನು ಬೇಕಾದರೂ ಕರೆತರುವಷ್ಟು ಶಕ್ತಿ ರಮೇಶಗಿದೆ: ಕಾರಜೋಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಗೋಕಾಕದ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಇತರ ಪಕ್ಷಗಳ ಎಷ್ಟು ಮಂದಿ ಶಾಸಕರನ್ನು ಬೇಕಾದರೂ ಬಿಜೆಪಿಗೆ ಕರೆತರುವಷ್ಟು ಶಕ್ತಿ–ತಾಕತ್ತು ಇದೆ’ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

ಇಲ್ಲಿ ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು, ‘ರಮೇಶ ಹಿರಿಯ ರಾಜಕಾರಣಿ. ಮಾಜಿ ಮಂತ್ರಿ ಹಾಗೂ ಅನುಭವಿ. ಅವರ ಸಂಪರ್ಕದಲ್ಲಿ ಎಷ್ಟೋ ಮಂದಿ ಶಾಸಕರು ಇರಬಹುದು. ಆ ವಿಷಯದ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ’ ಎಂದು ಪ್ರತಿಕ್ರಿಯಿಸಿದರು.

‘ಅವರೊಂದಿಗೆ ಸಂಪರ್ಕದಲ್ಲಿ ಇರುವವರು ಬಯಸಿದರೆ ಬಿಜೆಪಿಗೆ ಬರಬಹುದು. ಪಕ್ಷವು ಎಲ್ಲರ ಶಕ್ತಿಯನ್ನೂ ಬಳಸಿಕೊಳ್ಳಲು ಸಮರ್ಥವಿದೆ’ ಎಂದರು.

ಓದಿ... ಮೊದಲು ಕಾಂಗ್ರೆಸ್‌ನಿಂದ ಬೇರೆ ಪಕ್ಷಕ್ಕೆ ಬರುವವರನ್ನು ತಡೆಯಲಿ: ಶ್ರೀನಿವಾಸ ಪೂಜಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು