ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನ ಪರಿಷತ್‌ ಚುನಾವಣೆ | ಕೋಟ್ಯಾಧಿಪತಿ ಲಖನ್ ಬಳಿ‌ 7 ಕಾರು!

Last Updated 23 ನವೆಂಬರ್ 2021, 21:35 IST
ಅಕ್ಷರ ಗಾತ್ರ

ಬೆಳಗಾವಿ: ವಿಧಾನಪರಿಷತ್‌ ಚುನಾವಣೆಗೆ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ₹ 12.84 ಕೋಟಿ ಚರಾಸ್ತಿ ಹಾಗೂ ₹ 33.30 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ.

ನಾಮಪತ್ರದೊಂದಿಗೆ ಚುನಾವಣಾ ಆಯೋಗಕ್ಕೆ ಆಸ್ತಿ ವಿವರವನ್ನು ಅವರು ಸಲ್ಲಿಸಿದ್ದಾರೆ. ಪತ್ನಿ ಸಂಧ್ಯಾ ಹೆಸರಿನಲ್ಲಿ ₹ 1.45 ಕೋಟಿ ಚರಾಸ್ತಿ ಹಾಗೂ ₹ 1.93 ಕೋಟಿ ಸ್ಥಿರಾಸ್ತಿ ಇದೆ ಎಂದು ತಿಳಿಸಿದ್ದಾರೆ.

₹ 1.48 ಕೋಟಿ ಸಾಲ ಹೊಂದಿದ್ದಾರೆ. ಪತ್ನಿ ಹೆಸರಿನಲ್ಲಿ ₹ 2.50 ಕೋಟಿ ಸಾಲವಿದೆ. ಸರ್ಕಾರಕ್ಕೆ ₹ 2.37 ಕೋಟಿ ಬಾಕಿ ಇದು, ಅದಕ್ಕೆ ಸಂಬಂಧಿಸಿದಂತೆ ವ್ಯಾಜ್ಯವಿದೆ ಎಂದು ತಿಳಿಸಿದ್ದಾರೆ.

50 ವರ್ಷದ ಅವರು, ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದಿರುವುದಾಗಿ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಖಾತೆ ಇಲ್ಲ. ₹ 14.95 ಲಕ್ಷ ನಗದು ಹೊಂದಿದ್ದಾರೆ. ₹ 96.80 ಲಕ್ಷ ಮತ್ತು ₹ 71.34 ಲಕ್ಷ ಬೆಲೆ ಇರುವ ಕಾರೂ ಸೇರಿದಂತೆ ಒಟ್ಟು 7 ಕಾರುಗಳಿವೆ. ಅವರ ಪತ್ನಿ ಹೆಸರಿನಲ್ಲಿ ₹ 30 ಲಕ್ಷ ಬೆಲೆ ಕಾರಿದೆ.

ಐದು ಕೆ.ಜಿ. ಚಿನ್ನ, 8.37 ಕೆ.ಜಿ. ಬಂಗಾರದ ಆಭರಣ ಇವೆ. ಪತ್ನಿ ಹೆಸರಿನಲ್ಲಿ ₹ 37 ಲಕ್ಷ ಮೌಲ್ಯದ ಚಿನ್ನ ಮತ್ತು ವಜ್ರಾಭರಣಗಳಿವೆ. ಪುತ್ರಿ ಐಶ್ವರ್ಯಾ, ಪುತ್ರರಾದ ಆದಿತ್ಯ ಮತ್ತು ಆರ್ಯ ಹೆಸರಿನಲ್ಲಿ ತಲಾ ₹ 8.94 ಲಕ್ಷ ಮೌಲ್ಯದ ಚಿನ್ನಾಣರಣಗಳಿವೆ ಎಂದು ತಿಳಿಸಿದ್ದಾರೆ.

ಪತ್ನಿ– ₹ 2.50 ಕೋಟಿ, ಪುತ್ರಿ ಐಶ್ವರ್ಯಾ– ₹ 12.17 ಲಕ್ಷ ಹಾಗೂ ಪುತ್ರ ಆದಿತ್ಯ– ₹ 18.61 ಲಕ್ಷ ಸಾಲ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT