‘ಒಎಂಆರ್ ಶೀಟ್‌ನ ಬಂಡಲುಗಳು ಬೇರೆಬೇರೆ ಕೊಠಡಿಗಳಿಗೆ ಹೋಗಿದ್ದರಿಂದ ಗೊಂದಲವಾಗಿದೆ’ ಎಂದು ಪರೀಕ್ಷಾ ಸಿಬ್ಬಂದಿ ತಿಳಿಸಿದರು. ಆದರೆ, ಇದಕ್ಕೆ ಒಪ್ಪದ ಅಭ್ಯರ್ಥಿಗಳು, ‘ಪ್ರಶ್ನೆ ಪತ್ರಿಕೆ ಸೋರಿಕೆ ಆಗಿರುವ ಶಂಕೆ ಇದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಬರಬೇಕು’ ಎಂದು ಪಟ್ಟು ಹಿಡಿದರು. ಕೆಲವೇ ನಿಮಿಷಗಳಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸ್ಥಳಕ್ಕೆ ಬಂದು, ಪರಿಸ್ಥಿತಿ ನಿಭಾಯಿಸಿದರು.