ಕಾಗವಾಡ: ತಾಲ್ಲೂಕಿನ ಐನಾಪೂರ ಪಟ್ಟಣದ ರೈತ ಅಪ್ಪಾಸಾಬ ದಾನೊಳ್ಳಿ ಅವರ ಕಬ್ಬಿನ ಬೆಳೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ. ಆರು ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿಯಾಗಿದೆ.

‘ರಸ್ತೆ ವಿಚಾರವಾಗಿ ಸುನೀತಾ ನಾಗನೂರ ಎಂಬುವವರ ಜೊತೆಗೆ ವಿವಾದ ಇತ್ತು. ಈ ಜಗಳ ವಿಕೋಪಕ್ಕೆ ತಿರುಗಿ ಸುನೀತಾ ಸಹೋದರರು ಕಬ್ಬಿನ ಗದ್ದೆಗೆ ಬೆಂಕಿ ಹಚ್ಚಿದ್ದಾರೆ. ಕೇಳಲು ಹೋದಾಗ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಅಂದಾಜು ಸುಮಾರು ₹10 ಲಕ್ಷ ಮೌಲ್ಯದ 300 ಟನ್ಗೂ ಅಧಿಕ ಕಬ್ಬು ಸುಟ್ಟು ಕರಕಲಾಗಿದೆ’ ಎಂದು ರೈತ ಅಪ್ಪಾಸಾಬ ದಾನೊಳ್ಳಿ ಆರೋಪಿಸಿದ್ದಾರೆ.

ಕಾಗವಾಡ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಮೂರು ದಿನ ಕಳೆದರೂ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಪ್ರಕರಣದ ಬಗ್ಗೆ ಶೀಘ್ರ ಕ್ರಮಕೈಗೊಳ್ಳುವದಾಗಿ ಡಿ.ಎಸ್.ಪಿ. ಪ್ರಶಾಂತ ಮುನ್ನೋಳ್ಳಿ ತಿಳಿಸಿದರು.

ಸಿಪಿಐ ಸಂತೋಷ ಹಳ್ಳೂರ, ಕಾಗವಾಡ ಪಿಎಸ್ಐ ಗಂಗಾ ಬಿರಾದಾರ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.