‘ನಾಯಿಯನ್ನು ಕಟ್ಟಿಹಾಕಿ ಮೇಡಂ, ಸಮೀಕ್ಷೆಗೆ ಬಂದಿದ್ದೇವೆ...’ ಧ್ವನಿ ಕೇಳಿ ಹೊರಬಂದ ಸುಮಿ, ‘ಬನ್ನಿ, ನಮ್ಮ ನಾಯಿ ಬೊಗೊಳೊಲ್ಲ, ಕಚ್ಚೊಲ್ಲ, ಬೀದಿ ನಾಯಿ ಬೊಗಳಿದರೂ ಹೆದರಿ ಮನೆಯೊಳಗೆ ಬಂದುಬಿಡುತ್ತದೆ. ತುಂಬಾ ಸಾಧು’ ಎಂದಳು.

‘ನಾಯಿ ಇದೆ ಎಚ್ಚರಿಕೆ ಬೋರ್ಡಿಗಾಗಿ ನಾಯಿ ಸಾಕಿದ್ದೇವೆ ಅಷ್ಟೇ’ ಎಂದು ಶಂಕ್ರಿ ಬಂದವರಿಗೆ ಕುರ್ಚಿ ಹಾಕಿದ. ಸುಮಿ ಕಾಫಿ ತಂದುಕೊಟ್ಟಳು.

‘ನೀವು ಕುರಿ, ಮೇಕೆ, ಕೋಳಿ ಸಾಕಿದ್ದೀರಾ?’ ಪ್ರಶ್ನೆ ಕೇಳಿದರು. ‘ಅವುಗಳನ್ನು ಸಾಕಿದ್ದರೆ ಆದಾಯ ಬರ್ತಿತ್ತು. ಆದಾಯವಿಲ್ಲದ ನಾಯಿ ಸಾಕಿದ್ದೇವೆ. ರೇಷನ್ ಕಾರ್ಡಿನಲ್ಲಿ ಹೆಸರಿಲ್ಲದಿದ್ದರೂ ನಾಯಿಯ ತಿಂಗಳ ಮೇವಿನ ಖರ್ಚು ನಮಗಿಂಥಾ ಜಾಸ್ತಿಯಾಗುತ್ತೆ’ ಅಂದ ಶಂಕ್ರಿ.

‘ಚಿನ್ನಾಭರಣ ಏನೇನಿವೆ?’

‘ಇ.ಡಿಯವರು ಎನ್ಕ್ವಯಿರಿ ಮಾಡಿದಂತೆ ಕೇಳ್ತೀರಲ್ಲಾ ಸಾರ್...’ ಬೇಸರಗೊಂಡ ಸುಮಿ, ‘ಒರಿಜಿನಲ್ ಒಡವೆಗಳನ್ನೂ ಬ್ಯಾಂಕಿನಲ್ಲಿ ಅಡವಿಟ್ಟು, ನಕಲಿ ಒಡವೆ ಹಾಕಿಕೊಂಡಿದ್ದೀನಿ, ಹಾಗಂತ ನೆರೆಹೊರೆಯವರಿಗೆ ಹೇಳಬೇಡಿ, ಮರ್ಯಾದೆ ಹೋಗುತ್ತೆ’ ಪಿಸುಗುಟ್ಟಿದಳು.

‘ಫ್ರಿಜ್, ವಾಷಿಂಗ್ ಮೆಷಿನ್ ಎಷ್ಟಿವೆ?’

‘ಇವೆ. ಅವುಗಳ ಸಾಲದ ಕಂತು ಬಾಕಿ ಇದೆ’ ಶಂಕ್ರಿಗೆ ಅಳುಕು.

‘ಪತ್ನಿಯ ಉದ್ಯೋಗ?’

‘ಹೌಸ್ ವೈಫ್, ಸಂಬಳವಿಲ್ಲದ ಕೆಲಸ’ ಸುಮಿಗೆ ಬೇಸರ.

‘ಸಮೀಕ್ಷೆಯಲ್ಲಿ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಬೇಕಾ ಸಾರ್? ಔಟಾಫ್ ಸಿಲೆಬಸ್ ಪ್ರಶ್ನೆಗಳೂ ಇವೆ’.

‘ನಿಮಗೆ ಗೊತ್ತಿರುವ ಪ್ರಶ್ನೆಗಳಿಗೆ ಉತ್ತರಿಸಿದರೆ ಸಾಕು. ನಿಮ್ಮ ಸ್ಥಿತಿಗತಿ ದಾಖಲಿಸುವ ನಿಮ್ಮ ‘ಸಂಸಾರದ ಸತ್ವಪರೀಕ್ಷೆ’ ಇದು’.

‘ನಿಮ್ಮ ಕುಟುಂಬದ ಸಮೀಕ್ಷೆ ಮುಗಿಯಿತೆ? ನೀವು ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ ಡಿಸ್ಟಿಂಕ್ಷನ್ ಪಡೆದಿದ್ದೀರಿ ಅಲ್ವಾ?’ ಶಂಕ್ರಿ ಕೇಳಿದ.

‘ಟಫ್ ಪ್ರಶ್ನೆಗಳಿಗೆ ನಾನೂ ಆನ್ಸರ್ ಮಾಡಲಿಲ್ಲ. 35 ಪರ್ಸೆಂಟ್ ಪ್ರಶ್ನೆಗಳಿಗೆ ಉತ್ತರಿಸಿ ಜಸ್ಟ್ಪಾಸ್ ಆಗಿದ್ದೇನೆ...’ ಎಂದು ನಕ್ಕು ಸಮೀಕ್ಷಕರು ಹೊರಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.