ಶನಿವಾರ, ಮಾರ್ಚ್ 25, 2023
22 °C

ಬೆಳಗಾವಿ: ಅಂಗನವಾಡಿ ಕೇಂದ್ರಗಳು ಪುನರಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಅಂಗನವಾಡಿ ಕೇಂದ್ರಗಳು ಸೋಮವಾರ ಪುನರಾರಂಭಗೊಂಡವು.

ಒಂದೂವರೆ ವರ್ಷದಿಂದ ಭಣಗುಡುತ್ತಿದ್ದ ಅಂಗನವಾಡಿ ಕೇಂದ್ರಗಳ ಅಂಗಳದಲ್ಲಿ ಚಿಣ್ಣರ ಕಲರವ ಕಂಡುಬಂತು.

ಪುಟಾಣಿಗಳಿಗೆ ಕೇಂದ್ರದವರು ಹೂವು, ಬಲೂನ್ ನೀಡಿ ಸ್ವಾಗತಿಸಿಕೊಂಡರು.

ಇಲ್ಲಿನ ರುಕ್ಮಿಣಿ ನಗರ ಅಂಗನವಾಡಿ ಕೇಂದ್ರವನ್ನು ಆಕರ್ಷಕವಾಗಿ  ಸಿಂಗರಿಸಲಾಗಿತ್ತು. ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಮಕ್ಕಳನ್ನು ಬರಮಾಡಿಕೊಂಡರು. ಪೌಷ್ಟಿಕ ಆಹಾರ ಹಾಗೂ ಸಿಹಿ ವಿತರಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಬಸವರಾಜ ವರವಟ್ಟಿ ಮಾತನಾಡಿ, ಜಿಲ್ಲೆಯಲ್ಲಿ 5,331 ಅಂಗನವಾಡಿ ಕೇಂದ್ರಗಳಿದ್ದು, 3-6 ವರ್ಷ ವಯಸ್ಸಿನ 2 ಲಕ್ಷ ಮಕ್ಕಳು ಓದುತ್ತಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಅಗತ್ಯ ಸುರಕ್ಷತಾ ಕ್ರಮ ಕೈಗೊಂಡು, ಕಲಿಕಾ ಚಟುವಟಿಕೆ ಕೈಗೊಳ್ಳಲಾಗುವುದು. ಪಾಲಕರು ನಿರಾತಂಕವಾಗಿ ಮಕ್ಕಳನ್ನು ಕೇಂದ್ರಕ್ಕೆ ಕಳುಹಿಸಬೇಕು ಎಂದರು.

ನಗರ ವಲಯದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಂ.ಎಸ್. ರೊಟ್ಟಿ, ಮೇಲ್ವಿಚಾರಕಿ ರುಬಿನಾ ಮಾದಾರ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು