ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಂಗಿ: ಜಗದೀಶ ಶೆಟ್ಟರ್ ರೋಡ್‌ ಶೋ

Published 5 ಮೇ 2024, 6:49 IST
Last Updated 5 ಮೇ 2024, 6:49 IST
ಅಕ್ಷರ ಗಾತ್ರ

ಸವದತ್ತಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಸವದತ್ತಿ ಮತಕ್ಷೇತ್ರದ ಶಿರಸಂಗಿ ಗ್ರಾಮದಲ್ಲಿ ಶನಿವಾರ ಬೃಹತ್ ರೋಡ್ ಶೋ ಮಾಡಿ ಶಕ್ತಿ ಪ್ರದರ್ಶಿಸಿದರು.

ಒಂದು ತಾಸಿಗೂ ಹೆಚ್ಚು ಕಾಲ ನಡೆದ ಈ ರೋಡ್ ಶೋನಲ್ಲಿ ಅಪಾರ ಸಂಖ್ಯೆಯ ಜನ ಸೇರಿದ್ದರು. ಬಿಜೆಪಿ– ಜೆಡಿಎಸ್ ಮುಖಂಡರು ಜಗದೀಶ ಶೆಟ್ಟರ್‌ ಅವರಿಗೆ ಸಾಥ್ ನೀಡಿದರು. ಮಾರ್ಗದುದ್ದಕ್ಕೂ ಮೋದಿ, ಮೋದಿ ಘೋಷಣೆಗಳು ಮೊಳಗಿದವು.

‘ಗ್ರಾಮಸ್ಥರ ಬೆಂಬಲ ನೋಡಿದರೆ ಈ ಬಾರಿ ಮತ್ತೊಮ್ಮೆ ಕಮಲ ಅರಳುವುದು ಶತಸಿದ್ಧ ಎಂಬುದು ಖಾತ್ರಿಯಾಗಿದೆ’ ಎಂದು ಶೆಟ್ಟರ್‌ ವಿಶ್ವಾಸ ವ್ಯಕ್ತಪಡಿಸಿದರು.

ಸವದತ್ತಿಯಲ್ಲೂ ಪ್ರಚಾರ: ಸವದತ್ತಿ ಬಾರ್‌ ಅಸೋಸಿಯೇಷನ್‌ ಸದಸ್ಯರನ್ನು ಭೇಟಿ ಮಾಡಿದ ಜಗದೀಶ ಶೆಟ್ಟರ್‌ ನತಯಾಚನೆ ಮಾಡಿದರು.

‘ನನಗೆ ಬೆಳಗಾವಿ ಜೊತೆ ವಿಶೇಷವಾದ ನಂಟು ಇದೆ. ಹುಬ್ಬಳ್ಳಿ ನನ್ನ ಜನ್ಮ ಭೂಮಿಯಾದರೆ ಬೆಳಗಾವಿ ನನ್ನ ಕರ್ಮ ಭೂಮಿ. ಸಂವಿಧಾನದ ಪ್ರಕಾರ ಯಾರು ಎಲ್ಲಿ ಬೇಕಾದರೂ ಚುನಾವಣೆ ಸ್ಪರ್ಧೆ ಮಾಡಬಹುದು. ನಾನು ಚುನಾವಣೆ ಗೆದ್ದ ಮೇಲೆ ಐದು ವರ್ಷ ಜನರಿಗೆ ಸೇವೆ ನೀಡಬೇಕು.‌ ನನಗೆ ರಾಜಕೀಯದಲ್ಲಿ ಸಾಕಷ್ಟು ಅನುಭವ ಇದೆ. ಲೋಕಸಭೆಗೆ ಗೆದ್ದು ಹೊದ ಮೇಲೆ ಬೆಳಗಾವಿ ಭಾಗದಲ್ಲಿ ಅನೇಕ ಯೋಜನೆಗಳು ಹಾಕಿಕೊಂಡಿದ್ದೇನೆ. ಬೆಳಗಾವಿಯನ್ನು ರಾಜ್ಯದಲ್ಲಿಯೇ ಮಾದರಿ ಜಿಲ್ಲೆಯನ್ನಾಗಿ ಮಾಡುತ್ತೇನೆ’ ಎಂದು ಶೆಟ್ಟರ್‌ ಭರವಸೆ ನೀಡಿದರು.

ವಕೀಲರ ಸಂಘದ ಅಧ್ಯಕ್ಷ ಎಂ.ಎನ್. ಮುತ್ತಿನ, ಬಿಜೆಪಿ ಮುಖಂಡ ವಿರೂಪಾಕ್ಷ ಮಾಮನಿ, ಜೆಡಿಎಸ್ ಮುಖಂಡ ಸೌರಭ ಚೋಪ್ರಾ, ಬಿ.ವೈ. ಮಲ್ಲಿಗೂಡರ, ಸಿ.ಜಿ. ತುನಮರಿ, ಜಗದೀಶ್ ಸಿಂತರಿ, ಎಂ.ಎಫ್ ಬಡಗೇರ ಹಾಗೂ ವಕೀಲರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT