ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಕೆಲಸಗಾರ; ಪ್ರಚಾರ ಪ್ರಿಯನಲ್ಲ: ಪಿ.ಸಿ.ಗದ್ದಿಗೌಡರ

ರೋಡ್ ಶೋನಲ್ಲಿ ಸಂಸದ ಪಿ.ಸಿ.ಗದ್ದಿಗೌಡರ ಹೇಳಿಕೆ
Published 2 ಮೇ 2024, 13:37 IST
Last Updated 2 ಮೇ 2024, 13:37 IST
ಅಕ್ಷರ ಗಾತ್ರ

ಮುಧೋಳ: ‘ನಾನು ಮಾಡಿದ ಕಾರ್ಯಗಳು ನಿಮ್ಮ ಮುಂದೆ ಇದೆ. ಮಾಡಿದ್ದನ್ನು ವೈಭವಿಕರಿಸಲು ನನ್ನಿಂದಾಗದು. ನಾನು ಪ್ರಚಾರ ಪ್ರಿಯನಲ್ಲ ಅದಕ್ಕಾಗಿ ಕ್ಷೇತ್ರದಲ್ಲಿ ಸಾಧಿಸಿರುವ ಸಾಧನೆಯ ಕೈಪಿಡಿಯನ್ನು ಮತದಾರರ ಮುಂದೆ ಇಡಲಾಗಿದೆ’ ಎಂದು ಬಾಗಲಕೋಟೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ, ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.

ನಗರದಲ್ಲಿ ಬುಧವಾರ ರೋಡ್ ಶೋ ನಡೆಸಿ ಛತ್ರಪತಿ ಶಿವಾಜಿ ಮಹಾರಾಜ ವೃತ್ತದಲ್ಲಿ ಮಾತನಾಡಿದ ಅವರು, ‘ನಾನು ವಂಶಪಾರಂಪರ ರಾಜಕಾರಣ ಮಾಡುತ್ತಿಲ್ಲ. ನನ್ನ ಮನೆಯಲ್ಲಿ ನನ್ನ ಬಿಟ್ಟು ಮತ್ಯಾರು ಜನಪ್ರತಿನಿಧಿಯಿಲ್ಲ. ನಾನು ಯಾವುದೇ ಉದ್ಯೋಗ, ಆಸ್ತಿ ಪಾಸ್ತಿ ಮಾಡಿಕೊಂಡಿಲ್ಲ’ ಎಂದರು.

‘ಕುಡಚಿ ರೈಲು ಮಾರ್ಗದ ವಿಳಂಬಕ್ಕೆ ಕಾಂಗ್ರೆಸ್ ಕಾರಣ. ವಿರೋಧ ಪಕ್ಷದ ನಾಯಕರಾಗಿದ್ದ ಜಿಲ್ಲೆಯ ಬದಾಮಿಯಿಂದ ಆಯ್ಕೆಯಾಗಿದ್ದ ಸಿದ್ಧರಾಮಯ್ಯ ಈ ಕುರಿತು ಒಂದೆ ಸಭೆ ಮಾಡಿಲ್ಲ. ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶಿವಾನಂದ ಪಾಟೀಲ ಈ ಸಭೆ ನಡೆಸಿಲ್ಲ. ಈಗ ಮಾತನಾಡುತ್ತಿದ್ದಾರೆ. ನಾನು ಅವರಂತೆ ಕೀಳು ರಾಜಕೀಯ ಮಾಡುವುದಿಲ್ಲ ಕ್ಷೇತ್ರದ ಪ್ರಜ್ಞಾವಂತ ಮತದಾರರ ಆಶೀರ್ವಾದ ನನ್ನ ಮೇಲಿದೆ’ ಎಂದರು.

ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ, ‘ರಾಜ್ಯದಲ್ಲಿ ಕಾಂಗ್ರೆಸ್ ದುರಾಡಳಿತದಿಂದ ಜನರಿಗೆ ಭ್ರಮನಿರಸವಾಗಿದೆ. ಜನರು ದೇಶದ ಸಮಗ್ರ ಅಭಿವೃದ್ಧಿಗೆ ಮೋದಿ ಪ್ರಧಾನಿಯಾಗಬೇಕು ಎಂದು ಬಯಸುತ್ತಿದ್ದಾರೆ. ನಾನು ಹೋದಲೆಲ್ಲ ಪ್ರಧಾನಿ ನರೇಂದ್ರ ಮೋದಿ ಮಾಡಿರುವ ನೂರಾರು ಯೋಜನೆಗಳನ್ನು ಮೆಲಕು ಹಾಕುತ್ತಿದ್ದಾರೆ. ಸೋಲಿನ ಭಯದಿಂದ ಕಾಂಗ್ರೆಸ್ ನಾಯಕರು ಮನಬಂದಂತೆ ಮಾತನಾಡುತ್ತಿದ್ದಾರೆ. ಜನತೆಗೆ ಖಚಿತವಾಗಿ ಗೊತ್ತಿದೆ ದೇಶಕ್ಕೆ ಮೋದಿ ಗ್ಯಾರಂಟಿ ಎಂಬುವುದು. ಪ್ರತಿ ಗ್ರಾಮದಲ್ಲಿ ಯುವಕರ ಪಡೆ ಬಿಜೆಪಿ ಸೇರುತ್ತಿದ್ದಾರೆ. ಗದ್ದಿಗೌಡರ ದಾಖಲೆ ಮತಗಳ ಅಂತರದಿಂದ ಗೆಲ್ಲುವುದು ಖಚಿತ’ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಕಾರ್ಯದರ್ಶಿ ಡಾ.ರವಿ ನಂದಗಾಂವಿ ಮಾತನಾಡಿದರು. ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸಂಗನಗೌಡ ಕಾತರಕಿ, ನಗರದ ಘಟಕದ ಅಧ್ಯಕ್ಷ ಕರಬಸಯ್ಯ ಹಿರೇಮಠ, ಜಿಲ್ಲಾ ಘಟಕದ ಉಪಾಧ್ಯಕ್ಷ ಶ್ರೀಶೈಲಗೌಡ ಪಾಟೀಲ, ಅರುಣ ಕಾರಜೋಳ ರಾಜೇಂದ್ರ ಟಂಕಸಾಲಿ,ನಾಗಪ್ಪ ಅಂಬಿ, ಶಂಕರ ಸಿಂಧೆ, ರಾಜು ಯಡಹಳ್ಳಿ, ಸುನೀಲ ಕಂಬೋಗಿ, ಗೌಡಪ್ಪಗೌಡ ಪಾಟೀಲ, ಈರಯ್ಯ ಗೋವಿಂದಪುರಮಠ, ಪುಂಡಲೀಕ ಬೋಯಿ, ಸುರೇಶ ಕಾಂಬಳೆ ಮುಂತಾದವರು ಇದ್ದರು.

ಮುಧೋಳದ ಛತ್ರಪತಿ ಶಿವಾಜಿ ಮಹಾರಾಜ ವೃತ್ತದಲ್ಲಿ ಸಂಸದ ಪಿ.ಸಿ ಗದ್ದಿಗೌಡರ ಮಾತನಾಡಿದರು.
ಮುಧೋಳದ ಛತ್ರಪತಿ ಶಿವಾಜಿ ಮಹಾರಾಜ ವೃತ್ತದಲ್ಲಿ ಸಂಸದ ಪಿ.ಸಿ ಗದ್ದಿಗೌಡರ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT