ಶನಿವಾರ, ಜೂನ್ 19, 2021
26 °C

ಮಲ್ಲಮ್ಮ ಜಯಂತಿ ಸರಳ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಗರದ ಬಸವರಾಜ ಕಟ್ಟೀಮನಿ ಸಭಾಂಗಣದಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ಕೋವಿಡ್ ಕಾರಣದಿಂದ ಸೋಮವಾರ ಸರಳವಾಗಿ ಆಚರಿಸಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಫೋಟೊಗೆ ಪುಷ್ಪಾರ್ಚನೆ ಮಾಡಿದರು. ಇಲಾಖೆಯ ಸಿಬ್ಬಂದಿ ವಿನೋದ್ ಸುಣಗಾರ, ಸಂತೋಷ ಚವ್ಹಾಣ, ಕೆಂಚಪ್ಪ ಮುರಗೊಡಿ, ವಸಂತ ಪಕ್ಕೇದ, ಮೆಹಬೂಬಿ ಇದ್ದರು.

‘ಸ್ತ್ರೀ ಕುಲಕ್ಕೆ ಮಾದರಿ’

ತೆಲಸಂಗ: ‘ಹೇಮರೆಡ್ಡಿ ಮಲ್ಲಮ್ಮ ಅವರು ಅರಿವಿಗಿಂತ ಆಚಾರ ದೊಡ್ಡದು ಎಂಬುದನ್ನು ಸಾಧಿಸಿ ಪ್ರಪಂಚಕ್ಕೆ ತೋರಿಸಿ ಹೆಣ್ಣು ಕುಲಕ್ಕೆ ಮಾದರಿಯಾಗಿದ್ದಾರೆ’ ಎಂದು ಪಿಡಿಒ ಬೀರಪ್ಪ ಕಡಗಂಚಿ ಹೇಳಿದರು.

ಇಲ್ಲಿನ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಸೋಮವಾರ ಸರಳವಾಗಿ ನಡೆದ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದಾನ ಗುಣ, ದಾಸೋಹ ತತ್ಪರತೆ, ನಿಸ್ವಾರ್ಥ ಭಕ್ತಿಗೆ ಮಲ್ಲಮ್ಮ ಹೆಸರಾಗಿದ್ದಾರೆ. ಅವರ ಬದುಕನ್ನು ಪ್ರತಿಯೊಬ್ಬರೂ ತಿಳಿದು ಅದರಂತೆ ನಡೆದರೆ ಕೌಟಂಬಿಕ ಜೀವನದಲ್ಲಿ ನೆಮ್ಮದಿ ಕಾಣಬಹುದು’ ಎಂದರು.

ಸಿಬ್ಬಂದಿ ಶಿವಾನಂದ ಬನಗೊಂಡ, ರಾಜು ಕುಮಠಳ್ಳಿ, ದಾನಪ್ಪ ಕರ್ಣಿ, ವಿಜು, ಅಲ್ಲು ಸವನೂರ, ರಮೇಶ ಸಿಂದಗಿ, ಮಹೇಶ ಕುಂಬಾರ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು