ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2.5 ಲಕ್ಷ ಮಾಸ್ಕ್ ವಿತರಣೆ: ಬಾಲಚಂದ್ರ

Last Updated 8 ಸೆಪ್ಟೆಂಬರ್ 2020, 15:34 IST
ಅಕ್ಷರ ಗಾತ್ರ

ಗೋಕಾಕ: ‘ಕೊರೊನಾ ವೈರಸ್‌ನಿಂದ ರಕ್ಷಣೆಗಾಗಿ ಅರಭಾವಿ ಕ್ಷೇತ್ರದಲ್ಲಿ 2ನೇ ಬಾರಿಗೆ ಪ್ರತಿ ಮನೆಗಳಿಗೆ ಮಾಸ್ಕ್‌ಗಳನ್ನು ವಿತರಿಸಲಾಗುವುದು’ ಎಂದು ಕೆಎಂಎಫ್ ಅಧ್ಯಕ್ಷರೂ ಆಗಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

ಮಂಗಳವಾರ ಪ್ರಕಟಣೆ ನೀಡಿರುವ ಅವರು, ‘34 ಗ್ರಾಮ ಪಂಚಾಯಿತಿ, 3 ಪಟ್ಟಣ ಪಂಚಾಯಿತಿ ಮತ್ತು ಮೂಡಲಗಿ ಪುರಸಭೆ ವ್ಯಾಪ್ತಿಗಳಲ್ಲಿ ಹಂಚಲು ಸೂಚಿಸಲಾಗಿದೆ’ ಎಂದಿದ್ದಾರೆ.

‘ಮೆಳವಂಕಿ, ಕೌಜಲಗಿ, ಯಾದವಾಡ, ಹಳ್ಳೂರ, ತುಕ್ಕಾನಟ್ಟಿ, ವಡೇರಹಟ್ಟಿ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಹಂಚಲಾಗುವುದು. ಜಿಲ್ಲಾ ಪಂಚಾಯಿತಿ, ಪಟ್ಟಣ ಪಂಚಾಯಿತಿ ಮತ್ತು ಪುರಸಭೆಗೆ ತಲಾ 25ಸಾವಿರ ಮಾಸ್ಕ್‌ ವಿತರಿಸಲಾಗುವುದು. ಕೊರೊನಾ ಯೋಧರಿಗೆ ಅವಶ್ಯವಿರುವ ಎನ್-95 ಮಾಸ್ಕ್‌, ಗ್ಲೌಸ್, ಸ್ಯಾನಿಟೈಸರ್ ಮೊದಲಾದ ಸುರಕ್ಷಾ ಸಾಮಗ್ರಿಗಳನ್ನು ಕೊಡಲಾಗುವುದು. ಸ್ಥಳೀಯ ಸಂಸ್ಥೆಗಳಿಗೆ ಫುಟ್ ಆಪರೇಟಿಂಗ್ ಸ್ಟಾಂಡ್‌ ಮತ್ತು 5 ಲೀಟರ್ ಸ್ಯಾನಿಟೈಸರ್ ನೀಡಲಾಗುತ್ತಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತಲಾ 10 ಪಿಪಿಇ ಕಿಟ್, ಫುಟ್ ಆಪರೇಟಿಂಗ್ ಸ್ಟಾಂಡ್, 5 ಲೀಟರ್ ಸ್ಯಾನಿಟೈಸರ್, 2 ಪಲ್ಸ್ ಆಕ್ಸಿಮೀಟರ್, ತಲಾ 50 ಸರ್ಜಿಕಲ್‌ ಮಾಸ್ಕ್ ಹಾಗೂ ಕ್ಯಾಪ್‌ಗಳನ್ನು ವಿತರಿಸಲಾಗುತ್ತಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT