ಇಲ್ಲಿನ ಸದಾಶಿವ ನಗರ, ನೆಹರೂ ನಗರ, ಇಂದಿರಾ ನಗರ, ಗಾಂಧಿ ನಗರ, ನ್ಯೂ ಗಾಂಧಿ ನಗರ, ಪಾಟೀಲ ಚಾಳ್, ಖಡೇಬಜಾರ್ ಪ್ರದೇಶ, ವಡಗಾವಿ, ತಿಳಕವಾಡಿ, ಶಹಾಪುರ, ಕಾಲೇಜ್ ರಸ್ತೆ, ಕೆಎಲ್‌ಇ ವಿಶ್ವವಿದ್ಯಾಲಯದ ಸುತ್ತಲಿನ ಪ್ರದೇಶದಲ್ಲಿ ಉತ್ತಮ ಮಳೆ ಸುರಿಯಿತು. ಈ ಪ್ರದೇಶದಲ್ಲಿ ಶಾಲೆ– ಕಾಲೇಜುಗಳ ಸಂಖ್ಯೆ ಹೆಚ್ಚಿರುವ ಕಾರಣ ಬೆಳಿಗ್ಗೆಯಿಂದಲೇ ವಿದ್ಯಾರ್ಥಿಗಳು ಕೊಡೆ ಆಸರೆ ಪಡೆದುಕೊಂಡರು.