ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ತಾಯಿ–ಮಕ್ಕಳು

Published 25 ಮಾರ್ಚ್ 2024, 22:47 IST
Last Updated 25 ಮಾರ್ಚ್ 2024, 22:47 IST
ಅಕ್ಷರ ಗಾತ್ರ

ಹಂದಿಗುಂದ(ಬೆಳಗಾವಿ ಜಿಲ್ಲೆ): ಪಾಲಬಾವಿಯ ದಿ.ಮಲಗೌಡ ನಾಯಿಕ(ಪಾಟೀಲ) ಸರ್ಕಾರಿ ಪ್ರೌಢಶಾಲೆಯ ಕೇಂದ್ರದಲ್ಲಿ ಸೋಮವಾರ ಇಬ್ಬರು ತಾಯಂದಿರು ಮತ್ತು ಅವರ ಮಕ್ಕಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದರು.

ಈ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿರುವ ಶ್ರೀಶೈಲ ಮೇತ್ರಿ ರೆಗ್ಯುಲರ್‌ ವಿದ್ಯಾರ್ಥಿಯಾಗಿ ಪರೀಕ್ಷೆ ಬರೆದರೆ, ಅವರ ತಾಯಿ, ಇದೇ ಪ್ರೌಢಶಾಲೆಯ ಬಿಸಿಯೂಟ ತಯಾರಿಕೆ ಸಹಾಯಕಿ ಶಶಿಕಲಾ ಪುನರಾವರ್ತಿತ ವಿದ್ಯಾರ್ಥಿಯಾಗಿ ಪರೀಕ್ಷೆಗೆ ಹಾಜರಾದರು.

ಮತ್ತೊಬ್ಬ ವಿದ್ಯಾರ್ಥಿ ಭರಮಲಿಂಗ ಮೇತ್ರಿ ರೆಗ್ಯುಲರ್‌ ಆಗಿ ಪರೀಕ್ಷೆ ಬರೆದರೆ, ಗೃಹಿಣಿಯಾದ ಅವರ ತಾಯಿ ಸುನಂದಾ ಪುನರಾವರ್ತಿತ ವಿದ್ಯಾರ್ಥಿಯಾಗಿ ಪರೀಕ್ಷೆಗೆ ಹಾಜರಾದರು.

Quote - ನನಗೀಗ 34 ವರ್ಷ ವಯಸ್ಸು. ಬಡತನದ ಕಾರಣಕ್ಕೆ ಬಾಲ್ಯದಲ್ಲಿ ಶಿಕ್ಷಣ ಪೂರ್ಣಗೊಳಿಸಲಾಗಲಿಲ್ಲ. ಈಗ ಉದ್ಯೋಗದ ನಿರೀಕ್ಷೆಯಿಂದ ಪರೀಕ್ಷೆಗೆ ಹಾಜರಾಗಿದ್ದೇನೆ –ಶಶಿಕಲಾ ಮೇತ್ರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT