ಮೂಡಲಗಿ: ಕರ್ನಾಟಕ ರಾಜ್ಯದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಪರವಾನಗಿ ಪಡೆದ ದಸ್ತು ಬರಹಗಾರರ ಒಕ್ಕೂಟದ ಕರೆ ಮೇರೆಗೆ ಪಟ್ಟಣದ ಉಪನೋಂದಣಿ ಕಚೇರಿ ಆವರಣದಲ್ಲಿ ಗುರುವಾರದಿಂದ ಲೇಖನಿ ಸ್ಥಗಿತಗೊಳಿಸಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಾಯಿತು.

ಪಂಚಾಕ್ಷರಿ ಹಿರೇಮಠ ಮಾತನಾಡಿ, ‘ಹೊರ ರಾಜ್ಯದಲ್ಲಿರುವಂತೆ ನಮ್ಮ ರಾಜ್ಯದಲ್ಲೂ ದಸ್ತು ಬರಹಗಾರರಿಗೆ ಪ್ರತ್ಯೇಕ ಲಾಗೀನ್ ನೀಡಬೇಕು. ನೋಂದಣಿ ಆಗುವ ಎಲ್ಲ ದಸ್ತಾವೇಜುಗಳಿಗೆ ಪತ್ರ ಬರಹಗಾರರು ಅಥವಾ ವಕೀಲರು ಬಿಕ್ಕಲಂ ಕಡ್ಡಾಯಗೊಳಿಸಬೇಕು. ಅನಧಿಕೃತ ವ್ಯಕ್ತಿಗಳನ್ನು ತಡೆಗಟ್ಟವುದು ಮತ್ತು ಕರ್ನಾಟಕದ ಎಲ್ಲ ದಸ್ತು ಬರಹಗಾರರಿಗೆ ಏಕ ಮಾದರಿ ಗುರುತಿನ ಚೀಟಿಯನ್ನು ನೀಡಬೇಕು. ಈ ಎಲ್ಲ ಬೇಡಿಕೆಗಳನ್ನು ಈಡೇರಿಸುವವರೆಗೂ ಮುಷ್ಕರ ಮುಂದುವರೆಯಲಿದೆ’ ಎಂದು ಹೇಳಿದರು.

ಬರಹಗಾರಾದ ಪಿ.ಬಿ. ಹಿರೇಮಠ, ಆರ್.ಎಂ. ಕುಲಕರ್ಣಿ, ಎಲ್.ಸಿಗಾಡವಿ, ಕೆ.ಎಸ್. ಹುಬಳಿ, ಎಂ.ಎನ್. ಶಿರಸಂಗಿ, ರಾಜು ಅಥಣಿ, ಎಸ್.ಬಿ. ಸಿದ್ದುಮಾಳಿ, ಎಸ್.ಎನ್. ಗೋಟಡಕಿ, ಎ.ಎಂ. ಥರಥರಿ, ಆರ್.ಎಂ. ಮಂಗಸೂಳಿ, ವಿ.ಎಸ್. ಶಿರಸಂಗಿ, ಜೆ.ಬಿ. ಗೋಕಾಕ, ಪರಶುರಾಮ ಮಡಿವಾಳರ, ಅಭಿನವ ಚಿಂಚಲಿ, ಶಿವಾನಂದ ಸಸಾಲಟ್ಟಿ, ಶಿವಾನಂದ ಸಣ್ಣಕ್ಕಿ, ಬಸವರಾಜ ಮುಧೋಳ, ಮಹಾದೇವ ನವನಿ, ಬಸವರಾಜ ಅಳಗೋಡಿ, ಸಂಜು ಅಂಗಡಿ, ಗುರುಸಿದ್ದ ತುಪ್ಪದ, ಸಂಜಯ ಪಾರ್ಶಿ, ಕುಮಾರ ಜಂಗನವರ, ದರ್ಶನ ಹಟ್ಟಿ, ರಮೇಶ ಸನ್ನಮಾನಿ, ರವಿ ಶಾಬನ್ನವರ, ಈರಪ್ಪ ಪಾರ್ಶಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.