ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೂಡಲಗಿ ಪುರಸಭೆ: ಖುರಶಾದ ನದಾಫ್ ಅಧ್ಯಕ್ಷೆ

Published : 29 ಆಗಸ್ಟ್ 2024, 6:38 IST
Last Updated : 29 ಆಗಸ್ಟ್ 2024, 6:38 IST
ಫಾಲೋ ಮಾಡಿ
Comments

ಮೂಡಲಗಿ: ಪಟ್ಟಣದ ಪುರಸಭೆ ಎರಡನೇ ಅವಧಿಗೆ ನೂತನ ಅಧ್ಯಕ್ಷರಾಗಿ ಬಿಜೆಪಿಯ ಖುರಶಾದ ಅನ್ವರ ನದಾಫ್ ಅವರು ಕೈ ಎತ್ತುವ ಮತದಾನದ ಮೂಲಕ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಭೀಮವ್ವ ದುರಗಪ್ಪ ಪೂಜೇರಿ ಅವಿರೋಧವಾಗಿ ಆಯ್ಕೆಯಾಗಿರುವರು.

ಬುಧವಾರದಂದು ಜರುಗಿದ ಮೂಡಲಗಿ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿಯಿಂದ ತಲಾ ಒಂದೊಂದು ನಾಮಪತ್ರಗಳು ಸಲ್ಲಿಕೆಯಾದವು. ಆದರೆ ಕೊನೆಯ ಕ್ಷಣಗಳಲ್ಲಿ ಜೆಡಿಎಸ್ ಅಭ್ಯರ್ಥಿ ಸತ್ಯವ್ವ ಶಿವಬಸು ಅರಮನಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರಿಂದ ಅಧ್ಯಕ್ಷ ಸ್ಥಾನಕ್ಕೆ ಮಾತ್ರ ಕೈ ಎತ್ತುವ ಮೂಲಕ ಮತದಾನ ಮಾಡುವ ಪ್ರಕ್ರಿಯೆ ಜರುಗಿತು. ಇನ್ನೂ ಉಪಾಧ್ಯಕ್ಷರ ಸ್ಥಾನ ಅವಿರೋಧವಾಗಿ ಆಯ್ಕೆಯಾಯಿತು. ಸಾಮಾನ್ಯ ಮಹಿಳೆಗೆ ಅಧ್ಯಕ್ಷ ಸ್ಥಾನವು ಮೀಸಲಿತ್ತು, ಉಪಾಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಿತ್ತು.

ಬಿಜೆಪಿಯ ಖುರಶಾದ ಅನ್ವರ ನದಾಫ ಅವರು 16 ಮತಗಳಿಂದ ಆಯ್ಕೆಯಾದರು. ಜೆಡಿಎಸ್‌ನ ಸತ್ಯವ್ಯ ಅರಮನಿ 2 ಮತಗಳನ್ನು ಪಡೆದು ಸೋಲು ಅನುಭವಿಸಿದರು.

ತಹಶೀಲ್ದಾರ್‌ ಮಹಾದೇವ ಸನ್ನಮುರಿ ಚುನಾವಣಾಧಿಕಾರಿ ಆಗಿದ್ದರು.

ಚುನಾವಣಾ ಪ್ರಕ್ರಿಯೆ ಮುಗಿದ ಬಳಿಕ ನೂತನ ಅಧ್ಯಕ್ಷ-ಉಪಾಧ್ಯಕ್ಷರಿಗೆ ಸತ್ಕರಿಸಿ ಗೌರವಿಸಲಾಯಿತು. ನಂತರ ಆಯ್ಕೆಯಾದ ಅಭ್ಯರ್ಥಿಗಳು ಜನರು ಪಟಾಕಿ ಸಿಡಿಸಿ, ಗುಲಾಲ್ ಎರಚಿ ವಿಜಯೋತ್ಸವ ಆಚರಿಸಿದರು.

ತಹಶೀಲ್ದಾರ ಕಚೇರಿಯ ಶಿರಸ್ತೆದಾರ ಪರುಶುರಾಮ ನಾಯಕ್, ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ, ಆರೋಗ್ಯ ನಿರೀಕ್ಷಕ ಚಿದಾನಂದ ಮುಗಳಖೋಡ, ಪುರಸಭೆ ಸದಸ್ಯರು, ಶಾಸಕರ ಆಪ್ತ ಸಹಾಯಕರಾದ ಡಿ.ಕೆ.ನಾಯಿಕ ಮತ್ತು ಸಿ.ಪಿ ಯಕ್ಸಂಬಿ ಉಪಸ್ಥಿತರಿದ್ದರು.

ಜೆಡಿಎಸ್‌ ಸದಸ್ಯರಿಗೆ ವಿಪ್‌ ಜಾರಿ: ಪುರಸಭೆಯ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿದ್ದ ಜೆಡಿಎಸ್‌ನ ಸತ್ಯವ್ವ ಶಿವಬಸು ಅರಮನಿ ಅವರಿಗೆ ಪುರಸಭೆಗೆ ಜೆಡಿಎಸ್‌ದಿಂದ ಆಯ್ಕೆಯಾಗಿದ್ದ 7 ಜನರ ಪೈಕಿ ಈರಣ್ಣ ಕೊಣ್ಣೂರ ಮಾತ್ರ ಮತವನ್ನು ಚಲಾಯಿಸಿದರು.

ಉಳಿದ ಜೆಡಿಎಸ್‌ ಸದಸ್ಯರಾದ ಶಿವಾನಂದ ಸಣ್ಣಕ್ಕಿ, ರೇಣುಕಾ ಹಾದಿಮನಿ, ಶಾಂತವ್ವ ಝಂಡೇಕುರಬರ, ಪಾರ್ವತಿ ಅಥಣಿ ಇವರು ಅಡ್ಡಮತದಾನ ಮಾಡಿರುವರು. ಆದಮ್‌ ತಾಂಬೂಳಿ ಮತದಾನದಿಂದ ಹೊರಗೆ ಉಳಿದರು. ಚುನಾವಣೆ ಪೂರ್ವದಲ್ಲಿ ಜೆಡಿಎಸ್ ಸದಸ್ಯರಿಗೆ ಬೆಳಗಾವಿ ಜಿಲ್ಲಾ ಜೆಡಿಎಸ್‌ ಗೌರವಾಧ್ಯಕ್ಷ ಪ್ರಕಾಶ ಆರ್. ಸೋನವಾಲಕರ ಅವರು ವಿಪ್‌ ಜಾರಿ ಮಾಡಿ ಅಡ್ಡ ಮತದಾನ ಮಾಡಿದರೆ ಪಕ್ಷದಿಂದ ಅನರ್ಹಗೊಳಿಸುವ ಸೂಚನೆ ನೀಡಿದ್ದರು. ಜೆಡಿಎಸ್‌ನ ನಾಲ್ವರು ಸದಸ್ಯರು ಜೆಡಿಎಸ್‌ನಿಂದ ಅನರ್ಹರಾಗುವ ಸಂಭವವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT