ಬುಧವಾರ, ಅಕ್ಟೋಬರ್ 28, 2020
21 °C

ಸುರೇಶ ಅಂಗಡಿ ಕುಟುಂಬದೊಂದಿಗೆ ಇಡೀ ಪಕ್ಷ ನಿಲ್ಲಲಿದೆ: ಕಟೀಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಸುರೇಶ ಅಂಗಡಿ ಅವರ ಕುಟುಂಬದ ಜೊತೆ ಇಡೀ ಪಕ್ಷ ನಿಲ್ಲಲಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ಇಲ್ಲಿ ಮಂಗಳವಾರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಸುರೇಶ ಅಂಗಡಿ ಮಾರ್ಗದರ್ಶಕರಾಗಿ ಹಿರಿಯ ಅಣ್ಣನಂತಿದ್ದರು. ಅವರು ನಿಧನರಾದಾಗ ನಾನು ಕ್ವಾರೆಂಟೈನ್‌ನಲ್ಲಿದ್ದೆ. ಹೀಗಾಗಿ ಆಗ ಬರಲು ಆಗಿರಲಿಲ್ಲ’ ಎಂದರು.

‘ಮುಂಬೈ ಕರ್ನಾಟಕ ಭಾಗದಲ್ಲಿ ಒಬ್ಬ ಪ್ರಭಾವಶಾಲಿ ನಾಯಕರಾಗಿದ್ದ ಅಂಗಡಿ. ಈ ಭಾಗದಲ್ಲಿ ಪಕ್ಷವನ್ನು ಕಟ್ಟಿ ಬೆಳಸಿದವರು. ಪಕ್ಷ ನಿಷ್ಠೆ, ಸಿದ್ಧಾಂತವನ್ನು ಅವರಿಂದ ಕಲಿಯಬೇಕು ರೈಲ್ವೆ ಖಾತೆ ರಾಜ್ಯ ಸಚಿವರಾದ ಬಳಿಕ ಹತ್ತಾರು ಸಚಿವರು ಮಾಡಿದ್ದಕ್ಕಿಂತ ಹೆಚ್ಚು ಹಾಗೂ
ಅತಿ ಹೆಚ್ಚು ಅನುದಾನವನ್ನು ರಾಜ್ಯಕ್ಕೆ ತಂದಿದ್ದಾರೆ’ ಎಂದು ಸ್ಮರಿಸಿದರು.

‘ಸುರೇಶ ಅಂಗಡಿ ಸ್ಮಾರಕ ಮತ್ತು ಬೆಳಗಾವಿ- ಯಶವಂತಪುರ ರೈಲಿಗೆ ಅವರ ಹೆಸರು ಇಡುವ ವಿಚಾರ ಸರ್ಕಾರದ ಮುಂದೆ ಇದೆ. ಪರಿಶೀಲನೆ ಮಾಡುತ್ತೇವೆ‌’ ಎಂದು ಹೇಳಿದರು. ನಂತರ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು