ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತೃಪ್ತ ಶಾಸಕರ ಬಗ್ಗೆ ಮುಂಬೈಯಿಂದ ರಹಸ್ಯವಾಗಿ ಮಾಹಿತಿ ಕಳುಹಿಸಿದ್ದೆ: ನವ್ಯಶ್ರೀ

Last Updated 23 ಜುಲೈ 2022, 10:19 IST
ಅಕ್ಷರ ಗಾತ್ರ

ಬೆಳಗಾವಿ: ರಾಜ್ಯದಲ್ಲಿ ಜೆಡಿಎಸ್–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಅತೃಪ್ತ ಶಾಸಕರ ಜತೆ ಮುಂಬೈಗೆ ತೆರಳಿದ್ದೆ. ಅಲ್ಲಿಂದ ರಹಸ್ಯವಾಗಿ ಮಾಹಿತಿ ಕಳುಹಿಸಿದ್ದೆ ಎಂದು ಚನ್ನಪಟ್ಟಣದ ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ರಾವ್‌ ಶನಿವಾರ ಹೇಳಿದ್ದಾರೆ.

ತೋಟಗಾರಿಕೆ ಇಲಾಖೆಯ ಖಾನಾಪುರದ ಸಸ್ಯ ಪಾಲನಾಲಯದ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆ ವಿರುದ್ಧ ದೂರು ನೀಡಲು ಬೆಳಗಾವಿಗೆ ಬಂದಿರುವ ಅವರು, ತಾವು ಯಾರನ್ನೂ ಹನಿಟ್ರ್ಯಾಪ್ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

‘ಕಾಂಗ್ರೆಸ್ಸಿನ ಅತೃಪ್ತ ಶಾಸಕರು ಮುಂಬೈಗೆ ಹೋಗಿದ್ದಾಗ ನಾನೂ ತೆರಳಿದ್ದೆ. ಅತೃಪ್ತರ ಬಗ್ಗೆ ಗುಪ್ತವಾಗಿ ಮಾಹಿತಿ ನೀಡುವಂತೆ ಪಕ್ಷದ ಹಿರಿಯ ರಾಜಕಾರಣಿಯೊಬ್ಬರು ನನ್ನನ್ನು ಕಳುಹಿಸಿದ್ದರು. ಆದರೆ, ಅಲ್ಲಿಗೆ ‘ಹನಿಟ್ರ್ಯಾಪ್’ ಮಾಡಲು ಹೋಗಿದ್ದೆ ಎಂದು ಕೆಲವರು ಅಪಪ್ರಚಾರ ಮಾಡಿದ್ದಾರೆ’ ಎಂದೂ ನವ್ಯಶ್ರೀ ಹೇಳಿದರು.

‘ಕಾಂಗ್ರೆಸ್ ಪ್ರಮುಖ ನಾಯಕರೇ ಮುಂಬೈಗೆ ಹೋಗಲು ಸೀಕ್ರೇಟ್ ಟಾಸ್ಕ್ ನೀಡಿದ್ದರು. ನನ್ನೊಂದಿಗೆ ಇನ್ನೂ ಮೂವರು ಮಹಿಳೆಯರಿದ್ದರು. ಅತೃಪ್ತ ಶಾಸಕರ ಚಲನವಲನ ನೋಡಿಕೊಳ್ಳುವ ಟಾಸ್ಕ್ ನಮ್ಮದಾಗಿತ್ತು. ನಮ್ಮ ನಾಯಕರಿಗೆ ವಾಟ್ಸ್‌ಆ್ಯ‍‍ಪ್‌ ಮೂಲಕ ಮಾಹಿತಿ ಕೊಡುತ್ತಿದ್ದೆ. ಆ ಜವಾಬ್ದಾರಿಯನ್ನು ನಾನು ಯಶಸ್ವಿಯಾಗಿ ನಿಭಾಯಿಸಿದ್ದೇನೆ' ಎಂದರು.

‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿಯ ಒಂದು ಕ್ಷೇತ್ರದಿಂದ ಸ್ಪರ್ಧಿಸುವ ಉದ್ದೇಶವಿತ್ತು. ನಾಯಕರೂ ಸಮ್ಮತಿಸಿದ್ದರು. ಆದರೆ, ನನ್ನ ತೇಜೋವಧೆ ಮಾಡಿದ್ದರಿಂದ ನನ್ನ ಉದ್ದೇಶ ಈಡೇರಿಸಕೊಳ್ಳಲು ಆಗಿಲ್ಲ’ ಎಂದೂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT