ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಹೇರ್‌: ಆಸ್ಟೇಲಿಯಾ ವಿದ್ಯಾರ್ಥಿಗಳ ಭೇಟಿ

Published 14 ಮಾರ್ಚ್ 2024, 5:44 IST
Last Updated 14 ಮಾರ್ಚ್ 2024, 5:44 IST
ಅಕ್ಷರ ಗಾತ್ರ

ಬೆಳಗಾವಿ: ಆಸ್ಟ್ರೇಲಿಯಾದ ಸದರ್ನ್‌ ಕ್ರಾಸ್‌ ವಿಶ್ವವಿದ್ಯಾಲಯದ 10 ನರ್ಸಿಂಗ್‌ ವಿದ್ಯಾರ್ಥಿಗಳು ಮತ್ತು ಇಬ್ಬರು ಅಧ್ಯಾಪಕರು ಮಾರ್ಚ್‌ 11ರಿಂದ 30ರವರೆಗೆ ‘ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮ’ದಡಿ ನಡೆಯಲಿರುವ ‘ಎಲೆಕ್ಟಿವ್‌ ಪ್ಲೇಸ್‌ಮೆಂಟ್‌’ನಲ್ಲಿ ಭಾಗವಹಿಸಲು ಬೆಳಗಾವಿಯ ಕಾಹೇರ್‌ನ ಇನ್‌ಸ್ಟಿಟ್ಯೂಟ್‌ ಆಫ್‌ ನರ್ಸಿಂಗ್‌ ಸೈನ್ಸ್‌ಗೆ ಭೇಟಿ ನೀಡಿದರು.

ಇವೆರಡೂ ಶೈಕ್ಷಣಿಕ ಸಂಸ್ಥೆಗಳು ಶೈಕ್ಷಣಿಕ ಒಡಂಬಡಿಕೆ ಮಾಡಿಕೊಂಡಿವೆ. ಇದರ ಭಾಗವಾಗಿ, ಆಸ್ಟ್ರೇಲಿಯಾದ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಬೆಳಗಾವಿಗೆ ಭೇಟಿ ನೀಡಿದ್ದಾರೆ. ಅವರೊಂದಿಗೆ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಸಂವಾದ ನಡೆಸಿದರು.

ಕಾಹೇರ್‌ ಉಪಕುಲಪತಿ ಡಾ.ನಿತಿನ್ ಗಂಗನೆ, ಕುಲಸಚಿವ ಎಂ.ಎಸ್‌.ಗಣಾಚಾರಿ, ಡಾ.ವೀರೇಶಕುಮಾರ ನಂದಗಾಂವ ಇತರರು ಪಾಲ್ಗೊಂಡಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT