ಭಾನುವಾರ, ಜೂನ್ 26, 2022
21 °C

ರೋಟರಿ–ಕೆಎಲ್‌ಇಯಿಂದ ‘ಆಮ್ಲಜನಕ ಬ್ಯಾಂಕ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಸ್ವಾರ್ಥ ಹಿತಾಸಕ್ತಿಗಳನ್ನು ಮರೆತು ನಿಷ್ಕಾಮ ಭಾವನೆಯಿಂದ ಸೇವೆ ನಿರ್ವಹಿಸಿದಾಗ ಮಾತ್ರ ಆರೋಗ್ಯಯುತ ಸಮಾಜ ನಿರ್ಮಿಸಲು ಸಾಧ್ಯವಿದೆ’ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹೇಳಿದರು.

ನಗರದ ಕೆಎಲ್ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆ ಮತ್ತು ರೋಟರಿ ಕ್ಲಬ್ ಬೆಳಗಾವಿ ಸಹಯೋಗದಲ್ಲಿ ಆರಂಭಿಸಿರುವ ‘ರೋಟರಿ ಕೆಎಲ್‌ಇ ಆಮ್ಲಜನಕ ಬ್ಯಾಂಕ್‌’ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜನಕಲ್ಯಾಣಕ್ಕಾಗಿ ಕೆಎಲ್‌ಇ ಹಾಗೂ ರೋಟರಿ ಸಂಸ್ಥೆಗಳು ಎಂದಿಗೂ ಮುಂದಿವೆ. ಪ್ರಸ್ತುತ ಆಮ್ಲಜನಕ ಕೊರತೆಯಿಂದ ಸಾವು–ನೋವುಗಳ ವರದಿಯನ್ನು ನೋಡುತ್ತಿದ್ದೇವೆ. ಇದನ್ನು ಮನಗಂಡು ಕೋವಿಡ್ ಪೀಡಿತರ ನೋವು ನಿವಾರಿಸುವ ಕೆಲಸ ಮಾಡುತ್ತಿದ್ದೇವೆ. ಇದು ನಿಜಕ್ಕೂ ಹೆಮ್ಮೆ ಎನಿಸುತ್ತದೆ’ ಎಂದರು.

ರೋಟರಿ ಕ್ಲಬ್‌ನ ಶರದ್ ಪೈ ಮಾತನಾಡಿ, ‘ನಾಗರಿಕರಲ್ಲಿ ಮನೆ ಮಾಡಿರುವ ಭೀತಿ ಹೋಗಲಾಡಿಸಲು ಇನ್ನೂ ಹೆಚ್ಚಿನ ಆಮ್ಲಜನಕ ಕಾನ್‌ಸನ್‌ಟ್ರೇಟರ್‌ಗಳನ್ನು ನೀಡಲಾಗುವುದು’ ಎಂದು ತಿಳಿಸಿದರು.

ಕೆಎಲ್ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಸಿ. ಧಾರವಾಡ, ‘ರೋಟರಿ ಕೆಎಲ್‌ಇ ಆಮ್ಲಜನಕ ಬ್ಯಾಂಕ್‌ ಜನಸ್ನೇಹಿಯಾಗಿದೆ. ಅವಶ್ಯವಿರುವ ರೋಗಿಗಳು ಈ ಸೇವೆ ಪಡೆಯಬಹುದು. ಅತ್ಯಲ್ಪ ಮುಂಗಡ ಹಣ ಪಾವತಿಸಬೇಕು. ಹೆಚ್ಚಿನ ಮಾಹಿತಿಗೆ ಮೊ: 8660369283, 9071413829, 8550887777 ಸಂಪರ್ಕಿಸಬಹುದು’ ಎಂದರು.

ಯುಎಸ್ಎಂ–ಕೆಎಲ್‌ಇ ನಿರ್ದೇಶಕ ಡಾ.ಎಚ್.ಬಿ. ರಾಜಶೇಖರ, ಕೆಎಲ್ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ.ಬಿ.ಎಸ್. ಮಹಾಂತಶೆಟ್ಟಿ, ಡಾ.ಆರ್.ಜಿ. ನೆಲವಿಗಿ, ಡಾ.ಆರ್‌.ಆರ್. ವಾಳ್ವೇಕರ, ಡಾ.ಶ್ರೀಕಾಂತ ಮೇತ್ರಿ, ರೋಟರಿ ಕ್ಲಬ್‌ ಖಜಾಂಚಿ ಗಣೇಶ ದೇಶಪಾಂಡೆ, ಸಾಗರ ಕಲಘಟಗಿ ಇದ್ದರು.

ರೊಟರಿ ಕ್ಲಬ್ ಅಧ್ಯಕ್ಷ ಡಾ.ಕೆ.ಎಂ. ಕೆಲೂಸ್ಕರ ಸ್ವಾಗತಿಸಿದರು. ಸಂತೋಷ ಇತಾಪೆ ನಿರೂಪಿಸಿದರು. ಕೆಎಲ್‌ಇ ಹೋಮಿಯೋಪತಿ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎ. ಉಡಚನಕರ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು