ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ₹101ರ ಗಡಿ ದಾಟಿದ ಪೆಟ್ರೋಲ್‌ ದರ

Last Updated 27 ಜೂನ್ 2021, 8:23 IST
ಅಕ್ಷರ ಗಾತ್ರ

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಇರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಐಒಸಿ, ಎಚ್‌ಪಿ ಹಾಗೂ ಬಿಪಿ ಕಂಪನಿಯ ಬಂಕ್‌ಗಳಲ್ಲಿ ವಾರದಿಂದೀಚೆಗೆ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಆಗುತ್ತಲೇ ಇದೆ.

ಹೋದ ವಾರ ಶತಕ ಬಾರಿಸಿದ್ದ ಲೀಟರ್ ಪೆಟ್ರೋಲ್‌ ಬೆಲೆಯು ಬರೋಬ್ಬರಿ ₹ 101ರ ಗಡಿಯನ್ನೂ ದಾಟಿದೆ.

ಡೀಸೆಲ್‌ ದರ ₹ 94ರ ಗಡಿ ದಾಟಿದೆ.

ತೈಲ ದರವು ದಿನದಿಂದ ದಿನಕ್ಕೆ ಏರಿಕೆ ಆಗುತ್ತಿರುವುದು, ಕೋವಿಡ್ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹೋದ ವಾರದ ಒಂದು ದಿನವೂ ಬೆಲೆ ಇಳಿಕೆಯಾಗಲಿಲ್ಲ.

ತೈಲ ಕಂಪನಿ;ಪೆಟ್ರೋಲ್‌;ಡೀಸೆಲ್

ಜೂನ್ 20;ಜೂನ್ 27;ಜೂನ್ 20;ಜೂನ್ 27

ಎಚ್‌ಪಿ;100.27;101.57;93.13;94.11

ಐಒಸಿ;100.28;101.56;93.12;94.10

ಬಿಪಿ;100.29;101.55;93.13;94.10

(ಲೀಟರ್‌ಗೆ₹ಗಳಲ್ಲಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT