ಭಾನುವಾರ, ಮೇ 29, 2022
21 °C

ಬೆಳಗಾವಿ: ಮೈತ್ರಿ ಸಂಘದಿಂದ ಮಹಳೆಯರಿಗೆ ಶೌಚಾಲಯ

ಪ್ರಜಾವಾಣಿ ವಾರ್ತೆ ‌ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ನಗರದಲ್ಲಿರುವ ಸರ್ಕಾರಿ ಅಧಿಕಾರಿಗಳ ಪತ್ನಿಯರು ಕಟ್ಟಿಕೊಂಡಿರುವ ‘ಮೈತ್ರಿ’ ಸಂಘದಿಂದ ಇಲ್ಲಿನ ರವಿವಾರ ಪೇಟೆಯ ಕಂಬಳಿಕೂಟ್‌ ಸಮೀಪ ತರಕಾರಿ ಮಾರುವವರು ಮೊದಲಾದ ಮಹಿಳೆಯರಿಗೆ ನಿರ್ಮಿಸಿರುವ ಆಧುನಿಕ ಸೌಲಭ್ಯಗಳನ್ನು ಹೊಂದಿರುವ ‘ಪಿಂಕ್‌’ ಶೌಚಾಲಯವನ್ನು ಈಚೆಗೆ ಉದ್ಘಾಟಿಸಲಾಯಿತು.

ಇದನ್ನು ಮಹಿಳೆಯರು ಉಚಿತವಾಗಿ ಬಳಸಬಹುದಾಗಿದೆ. ಜತೆಗೆ, ‘ನಾರಿ’ ಎಂಬ ಹೆಸರಿನ ಸ್ಯಾನಿಟರಿ ನ್ಯಾಪ್‌ಕಿನ್‌ ಯಂತ್ರವನ್ನೂ ಅಳವಡಿಸಿದ್ದಾರೆ. ಈ ಎಲ್ಲ ಸೌಲಭ್ಯಗಳನ್ನೂ ‘ಸುರಕ್ಷಾ ಎಂಬ ಉಪಕ್ರಮದ ಅಡಿಯಲ್ಲಿ ಕಲ್ಪಿಸಲಾಗಿದೆ. ಮೈತ್ರೇಯಿ ಬಿಸ್ವಾಸ್‌ ನೇತೃತ್ವದ ತಂಡ ಈ ಸೇವಾ ಕಾರ್ಯ ಮಾಡಿದೆ. ಅಲ್ಲಿನ ಮಹಿಳೆಯರಿಗೆ ನೆರವಾಗಿದೆ.

ಉದ್ಘಾಟನೆ ಕಾರ್ಯಕ್ರಮದಲ್ಲಿ ನಾಗನೂರು ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ, ನಗರಪಾಲಿಕೆ ಸದಸ್ಯೆ ರೇಷ್ಮಾ ಪಾಟೀಲ, ಬ್ರಹ್ಮಕುಮಾರಿ ಈಶ್ವರೀಯ  ವಿಶ್ವವಿದ್ಯಾಲಯದ ಅಂಬಿಕಾ, ಇಸ್ಲಾಮಿಕ್ ಬಾಲಕಿಯರ ಶಾಲೆಯ ಅಧ್ಯಕ್ಷೆ ಆಸ್ಮಾ ತೋಫಿಲ್, ಶಾಸಕ ಅನಿಲ ಬೆನಕೆ ಪತ್ನಿ ಮನೀಶಾ ಬೆನಕೆ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು