ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟದಲ್ಲಿರುವ ಮುದ್ರಕರಿಗೆ ನೆರವು: ಒತ್ತಾಯ

Last Updated 17 ಮೇ 2020, 9:51 IST
ಅಕ್ಷರ ಗಾತ್ರ

ಸವದತ್ತಿ: ‘ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಒಳಗಾಗಿರುವ ಸಣ್ಣ ಮತ್ತು ಅತಿ ಸಣ್ಣ ಮುದ್ರಣ ಕೆಲಸಗಾರರಿಗೆ ಸರ್ಕಾರದಿಂದ ಆರ್ಥಿಕ ಸಹಾಯ ನೀಡಬೇಕು’ ಎಂದು ಆಗ್ರಹಿಸಿ ಪ್ರೆಸ್‌ ಮಾಲೀಕರ ಸಂಘ ತಾಲ್ಲೂಕು ಘಟಕದ ಪದಾಧಿಕಾರಿಗಳು ಶನಿವಾರ ವಿಧಾನಸಭಾ ಉಪಸಭಾಧ್ಯಕ್ಷ ಆನಂದ ಮಾಮನಿ ಅವರಿಗೆ ಮನವಿ ಸಲ್ಲಿಸಿದರು.

‘ಮಾರ್ಚ್‌ನಿಂದ ಮೇವರೆಗೆ ಮದುವೆ ಹಾಗೂ ಶುಭ ಸಮಾರಂಭಗಳು, ಸರ್ಕಾರಿ ಹಾಗೂ ಅರೆ ಸರಕಾರಿ ಕಾರ್ಯಕ್ರಮಗಳು ನಡೆಯುತ್ತಿದ್ದವು. ಅವುಗಳಿಗೆ ಆಮಂತ್ರಣ ಪತ್ರಿಕೆ ಮುದ್ರಿಸುವುದು ಮೊದಲಾದ ಕೆಲಸಗಳನ್ನು ಮಾಡಿ ನಾವು ಜೀವನ ನಡೆಸುತ್ತಿದ್ದೆವು. ಆದರೆ, ನಮಗೆ ಕೆಲಸವೇ ಇಲ್ಲದಂತಾಗಿದೆ. ಬಹಳ ಕುಟುಂಬಗಳು ಬೀದಿಪಾಲಾಗುವ ಸ್ಥಿತಿ ಇದೆ. ಬಾಡಿಗೆ, ವಿದ್ಯುತ್ ಬಿಲ್ ಪಾವತಿಸುವ ಶಕ್ತಿಯನ್ನೂ ಕಳೆದುಕೊಂಡಿದ್ದೇವೆ. ಹೀಗಾಗಿ, ಸರ್ಕಾರ ನಮ್ಮ ನೆರವಿಗೆ ಬರಬೇಕು’ ಎಂದು ಕೋರಿದರು.

ಬಳಿಕ ತಹಶೀಲ್ದಾರ್ ಕಚೇರಿಗೂ ಮನವಿ ಸಲ್ಲಿಸಿದರು.

ಸಂಘದ ಬಿ.ಎಂ. ಶಿರಸಂಗಿ, ನೆಹರು ಕರಿಕಟ್ಟಿ, ಬಸಯ್ಯ ಗುಡ್ಡದಮಠ, ಈರಣ್ಣ ಗದಗ, ಬಸವರಾಜ ತುಳಜನ್ನವರ, ಈರಣ್ಣ ಪತ್ತಾರ, ಯಲ್ಲಪ್ಪ ಪೂಜಾರ, ಸಂಗಮೇಶ ಹೊಳಿಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT