ಬೆಳಗಾವಿ: ಸೇವೆ ಕಾಯಂ ಮಾಡಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ಮೂಲೆಮೂಲೆಯಿಂದ ಬಂದಿದ್ದ ಅತಿಥಿ ಉಪನ್ಯಾಸಕರು, ಇಲ್ಲಿನ ಸುವರ್ಣ ವಿಧಾನಸೌಧದ ಬಳಿ ಶುಕ್ರವಾರ ಪ್ರತಿಭಟನೆ ಮಾಡಿದರು. ಇಡೀ ದಿನ ಪಟ್ಟು ಬಿಡದೇ ಕೂತು ಆಕ್ರೋಶ ವ್ಯಕ್ತಪಡಿಸಿದರು. ಜನಪ್ರತಿನಿಧಿಗಳ ಎದುರು ಮಹಿಳೆಯರು ಕಣ್ಣೀರು ಹಾಕಿದರು.

ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ಅತಿಥಿ ಉಪನ್ಯಾಸಕರು, ‘ನ್ಯಾಯ ಸಿಗುವವರೆಗೆ ನಾವು ಇಲ್ಲಿಂದ ಕದಲುವುದಿಲ್ಲ. ನಮ್ಮ ಸಾವು ಇಲ್ಲಿಯೇ ಆಗಲಿ. ನಮ್ಮನ್ನು ಇದೇ ಸ್ಥಳದಲ್ಲಿ ಮಣ್ಣು ಮಾಡಿ, ಇಲ್ಲವೇ ನ್ಯಾಯ ಕೊಡಿ. ಶಿಕ್ಷಣ ಮತ್ತು ಕಾನೂನು ಸಚಿವ ಬಂದು ನ್ಯಾಯ ಕೊಡಿಸಬೇಕು’ ಎಂದರು.

ಮಧ್ಯಾಹ್ನ ಸ್ಥಳಕ್ಕೆ ಬಂದ ಸಚಿವ ಶರಣಬಸಪ್ಪ ದರ್ಶನಾಪೂರ ಮನವಿಪತ್ರ ಸ್ವೀಕರಿಸಿದರು. ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿ ತೆರಳಿದರು. ಅಷ್ಟಕ್ಕೆ ಸಮಾಧಾನವಾಗದ ಪ್ರತಿಭಟನಕಾರರು ಧರಣಿ ಮುಂದುವರಿಸಿದರು.

ಸ್ಥಳಕ್ಕೆ ಬಂದ ವಿಧಾನ ಪರಿಷತ್ ಸದಸ್ಯ ಸಂಕನೂರ ಎದುರು ಕಣ್ಣೀರು ಹಾಕಿದ ಅತಿಥಿ ಉಪನ್ಯಾಸಕಿಯರು,‘20 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಅರ್ಹತೆ ಇಲ್ಲ ಎಂಬ ನೆಪವೊಡ್ಡಿ ಕರ್ತವ್ಯದಿಂದ ತೆಗೆದು ಹಾಕಿ, ಬೀದಿಪಾಲು ಮಾಡಿದ್ದೀರಿ. ನಮ್ಮ ಕುಟುಂಬ ನಿತ್ಯವೂ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ. ಇಂಥ ಸರ್ಕಾರ ಯಾರಿಗೆ ಬೇಕು’ ಎಂದು ನೋವು ತೋಡಿಕೊಂಡರು.

ಸಂಕನೂರ ಅವರು ಅಲ್ಲಿಂದ ತೆರಳಿದ ಮೇಲೆ ಡಿಸಿಪಿ ನಾರಾಯಣ ಭರವನಿ ಅವರು ಪ್ರತಿಭಟನಕಾರರ ಮನವೊಲಿಸಲು ಯತ್ನಿಸಿದರು. ಭರವಸೆಗಳನ್ನು ನಂಬಿ ಹೋರಾಟ ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದ ಪ್ರತಿಭಟನಕಾರರು, ಸೌಧಕ್ಕೆ ಮುತ್ತಿಗೆ ಹಾಕಿತ್ತೇವೆ ಎಂದು ಹೊರಟರು. ಪೊಲೀಸರು ಅವರನ್ನು ಸ್ಥಳದಲ್ಲೇ ಹಿಡಿದಿಡಲು ಯತ್ನಿಸಿದರು. ನೂಕಾಟ– ತಳ್ಳಾಟ ನಡೆಯಿತು.

ಸಂಜೆ 5ರ ನಂತರ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಧರಣಿನಿರತರೊಂದಿಗೆ ಕೆಳಗೆ ಕುಳಿತರು. ಕೆಲವು ಬೇಡಿಕೆಗಳನ್ನು ಈಗಲೇ ಈಡೇರಿಸಲು ಸಾಧ್ಯವಿದೆ. ಮತ್ತೆ ಕೆಲವರು ಸರ್ಕಾರದ ಮಟ್ಟದಲ್ಲಿ ಆಗಬೇಕು. ಈ ಮನವಿಯಲ್ಲಿ ಸಂಬಂಧಿಸಿದ ಸಚಿವರ ಗಮನಕ್ಕೆ ತಂದು, ವಿಶೇಷ ಸಭೆ ಏರ್ಪಾಡು ಮಾಡುತ್ತೇನೆ ಎಂದು ಭರವಸೆ ನೀಡಿದರು.

ನಂತರ ಧರಣಿಯನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಳ್ಳಲಾಯಿತು. ಮುಖಂಡರಾದ ಲತಾ ಪಾಟೀಲ, ಹನುಮಂತಗೌಡ ಕಲ್ಮನಿ, ಶಶಿಕಲಾ ಜೋಳದ, ವಿ.ಡಿ. ಮುಳಗುಂದ ನೇತೃತ್ವ ವಹಿಸಿದ್ದರು.

ಹಲವು ವರ್ಷಗಳಿಂದ ಸೇವೆ ಸಲ್ಲಿಸಿದ್ದರೂ ಯುಜಿಸಿ ನಿಗದಿಪಡಿಸಿದ ಅರ್ಹತೆ ಹೊಂದಿಲ್ಲ ಎಂದು ಸೇವೆಯಿಂದ ತೆಗೆದ ಅತಿಥಿ ಉಪನ್ಯಾಸಕರನ್ನು ಮತ್ತೆ ನೇಮಕ ಮಾಡಿಕೊಳ್ಳಬೇಕು
ಲತಾ ಪಾಟೀಲ, ಅತಿಥಿ ಉಪನ್ಯಾಸಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.