ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಕೊರೊನಾ ಸೇನಾನಿಗಳು 2021: ಬೆಳಗಾವಿಯ ಮನಿಷಾ ಸಂಭಾಜಿ ಪಾಟೀಲ

Last Updated 31 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಹತ್ತು ವರ್ಷಗಳಿಂದ ಶುಶ್ರೂಷಕಿಯಾಗಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದೇನೆ. ಕೋವಿಡ್–19 ಕಾಣಿಸಿಕೊಂಡ ಸಂದರ್ಭದಲ್ಲಿ ಬಹುತೇಕರು ಹೆದರಿದರು. ಗುತ್ತಿಗೆ ಕೆಲಸವಿದು, ಬಿಟ್ಟುಬಿಡು ಎಂದು ಹಲವರು ಸಲಹೆ ಕೊಟ್ಟರು. ಆದರೆ, ಜೀವ ಭಯದಿಂದ ಕೆಲಸ ಬಿಟ್ಟರೆ ಸರಿ ಆಗುವುದಿಲ್ಲ; ಇಷ್ಟು ವರ್ಷ ಮಾಡಿದ ಸೇವೆಯೆಲ್ಲವೂ ವ್ಯರ್ಥ ಎಂದು ಭಾವಿಸಿ ಧೈರ್ಯದಿಂದ ಮುಂದುವರಿದೆ.

ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂಬ ಆಸೆ ಇತ್ತು. ಮದುವೆ ನಂತರ ಪತಿ ಹಾಗೂ ಕುಟುಂಬದವರ ಸಹಕಾರದಿಂದ ನರ್ಸಿಂಗ್ ಕೋರ್ಸ್‌ ಮುಗಿಸಿದೆ. ಸಂಬಳ ಕಡಿಮೆಯಾದರೂ ಬಯಸಿ ಬಂದ ಕೆಲಸವಿದು.

ಮುಚ್ಚಂಡಿಯಲ್ಲಿರುವ ತವರು ಮನೆಯಿಂದ ಆಸ್ಪತ್ರೆಗೆ ನಿತ್ಯವೂ ಹೋಗಿ ಬಂದು ಮಾಡುತ್ತಿದ್ದೆ. ಮನೆಯಲ್ಲಿ ಪ್ರತ್ಯೇಕವಾಗಿದ್ದು ಮಕ್ಕಳನ್ನು ದೂರದಿಂದಲೇ ನೋಡಿ ಸಮಾಧಾನ ಮಾಡಿಕೊಳ್ಳುತ್ತಿದ್ದೆ. ಕುಟುಂಬದವರು ನೀಡಿದ ಸಹಕಾರ ಮರೆಯಲಾಗದು.

ಕೊರೊನಾ ಆರಂಭವಾದಾಗಿನಿಂದ ಡಿ.24ರವರೆಗೆ 220 ಸಹಜ ಹೆರಿಗೆ ಮಾಡಿದ್ದೇವೆ. ಪ್ರಾಣದ ಹಂಗು ತೊರೆದು ಕೆಲಸ ಮಾಡಿ, ನೂರಾರು ಮಂದಿಗೆ ಸ್ಪಂದಿಸಿದ್ದಕ್ಕೆ ಹೆಮ್ಮೆ ಇದೆ. ಆಗ ಖಾಸಗಿ ಆಸ್ಪತ್ರೆಗಳಿಂದ ಹೆಚ್ಚಿನ ಸಂಬಳದ ಆಫರ್ ಕೂಡ ಬಂದಿತ್ತು. ಆದರೆ, ಸರ್ಕಾರಿ ಆಸ್ಪತ್ರೆ ಕೆಲಸ ಬಿಡಲಿಲ್ಲ.

-ಮನಿಷಾ ಸಂಭಾಜಿ ಪಾಟೀಲ, ಶುಶ್ರೂಷಕಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಮುತಗಾ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT