ಭಾವೈಕ್ಯ ಸಾರುತ್ತಿರುವ ಇಫ್ತಾರ್ ಕೂಟಗಳು
ಬೆಳಗಾವಿ ನಗರ ಮಾತ್ರವಲ್ಲ; ಜಿಲ್ಲೆಯ ವಿವಿಧ ಪಟ್ಟಣಗಳು ಹಳ್ಳಿಗಳ ಸಾರ್ವಜನಿಕ ಸ್ಥಳಗಳು ಮತ್ತು ಮಸೀದಿಗಳಲ್ಲಿ ನಿತ್ಯ ಸಂಜೆ ಸಾರ್ವಜನಿಕರು ಮತ್ತು ಸಂಘ–ಸಂಸ್ಥೆಗಳಿಂದ ಇಫ್ತಾರ್ ಕೂಟ ನಡೆಯುತ್ತಿವೆ. ಹಗಲಿಡೀ ಉಪವಾಸ ವ್ರತ ಕೈಗೊಂಡವರಿಗೆ ಫಲಾಹಾರ ಸಸ್ಯಾಹಾರ ಮತ್ತು ಮಾಂಸಾಹಾರ ವ್ಯವಸ್ಥೆ ಮಾಡಲಾಗುತ್ತಿದೆ. ಮುಸ್ಲಿಮರಷ್ಟೇ ಅಲ್ಲ; ಹಿಂದೂಗಳೂ ಇಫ್ತಾರ್ ಕೂಟಗಳಲ್ಲಿ ಭಾಗಿಯಾಗಿ ಭಾವೈಕ್ಯ ಮೆರೆಯುತ್ತಿದ್ದಾರೆ.