ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮದುರ್ಗ: ಹನಿ ನೀರಾವರಿ; ಬಂಪರ್‌ ಬೆಳೆ ತೆಗೆದ ರೈತ

Published 15 ಜೂನ್ 2023, 23:30 IST
Last Updated 15 ಜೂನ್ 2023, 23:30 IST
ಅಕ್ಷರ ಗಾತ್ರ

ಚನ್ನಪ್ಪ ಮಾದರ

ರೈತ ಚನ್ನಪ್ಪ ಮುದಕಪ್ಪ ಎಲಿಶೆಟ್ಟಿ ಅವರು ಕೃಷಿ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಹನಿ ನೀರಾವರಿ ಮೂಲಕ ಮಿತವಾಗಿ ಉಪಯೋಗಿಸಿ ಉತ್ತಮ ಬೆಳೆ ಬೆಳೆದಿದ್ದಾರೆ.

ರಾಮದುರ್ಗ: ತಾಲ್ಲೂಕಿನ ಉದಪುಡಿ ಗ್ರಾಮದಲ್ಲಿ ಸುತ್ತಲೂ ಮರಭೂಮಿಯಂತಹ ಬರಡು ಭೂಮಿ ಇದೆ. ಅದರಲ್ಲಿ ಗ್ರಾಮದ ರೈತ ಚನ್ನಪ್ಪ ಮುದಕಪ್ಪ ಎಲಿಶೆಟ್ಟಿ ಅವರು, ಕೊಳವೆಬಾವಿಯಿಂದ ಸಿಗುವ ಮೂರು ಇಂಚು ನೀರನ್ನು ಬಳಸಿಕೊಂಡು ತನ್ನ 3.29 ಎಕರೆ ಜಮೀನಿನಲ್ಲಿ ಉತ್ತಮ ಬೆಳೆ ತೆಗೆದು ಇತರೆ ರೈತರಿಗೂ ಮಾದರಿಯಾಗಿದ್ದಾರೆ.

ರೈತ ಚನ್ನಪ್ಪ ಮುದಕಪ್ಪ ಎಲಿಶೆಟ್ಟಿ ಅವರು ಕೃಷಿ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಹನಿ ನೀರಾವರಿ ಮೂಲಕ ಮಿತವಾಗಿ ಉಪಯೋಗಿಸಿ ಉತ್ತಮ ಬೆಳೆ ಬೆಳೆದಿದ್ದಾರೆ.

ಚನ್ನಪ್ಪ ಅವರು ತಮ್ಮ ಹೊಲದಲ್ಲಿ ಒಂದು ಎಕರೆ ನುಗ್ಗೆ ಗಿಡಗಳನ್ನು ಬೆಳೆದು ಅದರಲ್ಲಿಯೇ ಮಿಶ್ರ ಬೆಳೆಯಾಗಿ ಒಂದು ಎಕರೆ ಬಾಳೆ, ಒಂದು ಎಕರೆ ಪ್ರದೇಶದಲ್ಲಿ ಮಾವು ಬೆಳೆದು ಅದರ ಅಡಿಯಲ್ಲಿಯೇ ತರಕಾರಿ ಬೆಳೆದು ಹಣ ಗಳಿಸಿಕೊಳ್ಳುತ್ತಿದ್ದಾರೆ. ಉಳಿದ ಜಮೀನಿನಲ್ಲಿ ಕಬ್ಬು ನಾಟಿ ಮಾಡಿಕೊಂಡಿದ್ದಾರೆ.

ಚನ್ನಪ್ಪ ಅವರು ಹೊಲದಲ್ಲಿ ಎರಡು ಎತ್ತು, ನಾಲ್ಕು ಹಸು, ನಾಲ್ಕು ಎಮ್ಮೆ, 20 ಮೇಕೆ ಸಾಕಿಕೊಂಡು ಅವುಗಳಿಂದ ಬರುವ ಗೊಬ್ಬರದ ಬಳಕೆ ಮಾಡಿಕೊಂಡೆ ಕೃಷಿ ಅಭಿವೃದ್ಧಿ ಮಾಡಿಕೊಂಡಿದ್ದಾರೆ. ರಸಾಯನಿಕ ಗೊಬ್ಬರದ ಬಳಕೆ ಕಡಿಮೆ ಇದೆ. ಇದರಿಂದ ಆರೋಗ್ಯಕರ ಉತ್ಪನ್ನಗಳನ್ನು ಅವರು ತೆಗೆಯುತ್ತಿದ್ದಾರೆ.

ರಾಮದುರ್ಗ ತಾಲ್ಲೂಕಿನಲ್ಲಿಯೇ ಸರ್ಕಾರಿ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡಿರುವ ಚನ್ನಪ್ಪ ಮುದಕಪ್ಪ ಎಲಿಶೆಟ್ಟಿ ಅವರು ವ್ಯವಸಾಯವನ್ನು ಅಚ್ಚುಕಟ್ಟಾಗಿ ಮಾಡಿ ಮಾದರಿ ರೈತ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಎಸ್‌.ಎಫ್‌. ಬೆಳವಟಗಿ, ಸಹಾಯಕ ಕೃಷಿ ನಿರ್ದೇಶಕರು, ರಾಮದುರ್ಗ

ಕೊಳವೆ ಬಾವಿಯ ನೀರನ್ನು ಹರಿಬಿಡುವ ಮೂಲಕ ನೀರು ಹಾಯಿಸಿದರೆ ಎಲ್ಲ ಭೂಮಿಯನ್ನು ಹದ ಮಾಡಲು ಸಾಧ್ಯವಿಲ್ಲ ಎಂದು ಕೃಷಿ ಇಲಾಖೆಯ ಹನಿ ನೀರಾವರಿ, ತುಂತುರ ನೀರಾವರಿ ಬಳಸಿ ಮೊದಲಿನ ಲಾಭಕ್ಕಿಂತಲೂ ಪ್ರತಿಶತ 25 ರಷ್ಟು ಹೆಚ್ಚಿನ ಇಳುವರಿ ಪಡೆದು ಆರ್ಥಿಕವಾಗಿ ಮುಂದಾಗಿದ್ದಾರೆ. ಹೊಲದಲ್ಲಿ ಕೂಲಿಗಳನ್ನು ಬಳಸದೇ ತಮ್ಮ ಕುಟುಂಬದ ಸದಸ್ಯರನ್ನೇ ಹೆಚ್ಚಾಗಿ ಬಳಸಿಕೊಳ್ಳುವ ಚನ್ನಪ್ಪ ಎಲಿಶೆಟ್ಟಿ ಅವರು ಕೃಷಿ ಅಧಿಕಾರಿಗಳ ಮಾರ್ಗದರ್ಶನದಿಂದ ಮಾದರಿ ರೈತ ಎನಿಸಿಕೊಂಡಿದ್ದಾರೆ.

ಜಿಲ್ಲೆಯ ರೈತರು ಚನ್ನಪ್ಪ ಅವರ ಜಮೀನಿಗೆ ಭೇಟಿ ನೀಡಿ, ಚನ್ನಪ್ಪ ಅವರಿಂದ ನೀರು ಬಳಕೆಯ ಮಾಹಿತಿ ಪಡೆದು ತಮ್ಮ ಜಮೀನುಗಳಲ್ಲೂ ಈ ವಿಧಾನ ಬಳಸಿಕೊಳ್ಳಲು ಮುಂದಾಗಿದ್ದಾರೆ.

ಇಷ್ಟಕ್ಕೆ ತೃಪ್ತಿ ಹೊಂದದ ಚನ್ನಪ್ಪ ಅವರು ರೊಟ್ಟಿ ತಯಾರಿಸುವ ಯಂತ್ರವನ್ನೂ ಸರ್ಕಾರದ ರಿಯಾಯ್ತಿ ದರದಲ್ಲಿ ಪಡೆದುಕೊಂಡು ರೊಟ್ಟಿ ತಯಾರಿಸುವ ಕೆಲಸವನ್ನು ಆರಂಭಿಸಿದ್ದಾರೆ. ಸ್ವತಃ ರೊಟ್ಟಿ ತಯಾರಿಸಿ ಮಾರುವುದರ ಜೊತೆಗೆ ಗ್ರಾಮದ ಜನರ ಬೇಡಿಕೆಯಂತೆ ರೊಟ್ಟಿ ತಯಾರಿಸಿ ಅವರಿಗೂ ವಿತರಿಸುತ್ತಿದ್ದಾರೆ.

ನುಗ್ಗೆಯನ್ನು ವಿಂಗಡಿಸುವ ಕಾರ್ಯದಲ್ಲಿ ಕುಟುಂಬದ ಸದಸ್ಯರು ಮಗ್ನರಾಗಿದ್ದಾರೆ
ನುಗ್ಗೆಯನ್ನು ವಿಂಗಡಿಸುವ ಕಾರ್ಯದಲ್ಲಿ ಕುಟುಂಬದ ಸದಸ್ಯರು ಮಗ್ನರಾಗಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT