ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಅತ್ಯಾಚಾರವೆಸಗಿದ ಪಿಎಸ್‌ಐ– ವಿದ್ಯಾರ್ಥಿನಿಯಿಂದ ದೂರು ದಾಖಲು

Last Updated 18 ಫೆಬ್ರವರಿ 2023, 5:27 IST
ಅಕ್ಷರ ಗಾತ್ರ

ಬೆಳಗಾವಿ: ನಗರ ಪೊಲೀಸ್‌ ಆಯುಕ್ತಾಲಯದ ವ್ಯಾಪ್ತಿಗೆ ಬರುವ ವೈರ್‌ಲೆಸ್‌ ‍ಠಾಣೆಯ ಪಿಎಸ್‌ಐ ಲಾಲ್‌ಸಾಬ್‌ ಅಲ್ಲಿಸಾಬ್‌ ನದಾಫ (28) ಅವರು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ, ಕಾಲೇಜು ವಿದ್ಯಾರ್ಥಿನಿಯೊಬ್ಬರು ಗುರುವಾರ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಲಾಲ್‌ಸಾಬ್‌ ಅವರಿಗೆ ಫೆ. 10ರಂದು ಬೇರೊಬ್ಬ ಯುವತಿ ಜತೆಗೆ ಮದುವೆಯಾಗಿದೆ. ವಿಷಯ ಗೊತ್ತಾದ ಬಳಿಕ ವಿದ್ಯಾರ್ಥಿನಿ ದೂರು ದಾಖಲಿಸಿದ್ದಾರೆ.

‘2020ರ ಜೂನ್‌ 16ರಂದು ಪಿಎಸ್‌ಐ ಲಾಲ್‌ಸಾಬ್‌ ಫೇಸ್‌ಬುಕ್‌ ಮೆಸೆಂಜರ್‌ ಮೂಲಕ ಪರಿಚಯವಾಗಿದ್ದರು. ಪ್ರತಿ ದಿನ ಚಾಟ್‌ ಮಾಡಿ ಸ್ನೇಹ ಬೆಳೆಸಿದ್ದರು. ಮದುವೆ ಆಗುವುದಾಗಿ ನಂಬಿಸಿದ್ದರು. ಕೆಲ ದಿನಗಳ ನಂತರ ಬೆಳಗಾವಿಯ ಸುಭಾಷ ನಗರದ ತನ್ನ ರೂಮಿಗೆ ಕರೆದುಕೊಂಡು ಹೋಗಿ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಕೇಳಿದ್ದರು. ನಾನು ಒಪ್ಪದೇ ಇದ್ದಾಗ ಒತ್ತಾಯ ಪೂರ್ವಕವಾಗಿ ಲೈಂಗಿಕ ದೌರ್ಜನ್ಯ ಎಸಗಿದರು. ಈ ವಿಷಯ ಯಾರಿಗೂ ಹೇಳದಿದ್ದರೆ ಮದುವೆ ಮಾಡಿಕೊಳ್ಳುವುದಾಗಿ ಪದೇಪದೇ ಹೇಳಿದ್ದರು. ಅಲ್ಲದೇ ಮದುವೆ ಆಗುವ ಭರವಸೆ ನೀಡಿ ಬಾಂಡ್‌ ಕೂಡ ಬರೆದುಕೊಟ್ಟಿದ್ದರು. ಬಳಿಕ, ಬೆಳಗಾವಿಯ ಪೊಲೀಸ್‌ ವಸತಿಗೃಹ ಹಾಗೂ ಕೆಲವು ಲಾಡ್ಜ್‌ಗಳಿಗೂ ಕರೆದುಕೊಂಡು ಹೋಗಿ ಲೈಂಗಿಕ ಸಂಪರ್ಕ ಬೆಳೆಸಿದರು. ಆದರೆ, ಈಗ ಮತ್ತೊಬ್ಬಳೊಂದಿಗೆ ಮದುವೆ ಆಗಿದ್ದಾರೆ’ ಎಂದು ವಿದ್ಯಾರ್ಥಿನಿ ದೂರಿನಲ್ಲಿ ತಿಳಿಸಿದ್ದಾರೆ.

‘ನನ್ನನ್ನೇ ಮದುವೆ ಆಗುವುದಾಗಿ ಬಾಂಡ್‌ ಕೂಡ ಬರೆದುಕೊಟ್ಟಿದ್ದರಿಂದ, ಅದರ ಭರವಸೆ ಮೇಲೆ ನಾನು ಇಷ್ಟು ದಿನ ಸಹಿಸಿಕೊಂಡೆ. ಅಲ್ಲದೇ, ನನ್ನ ಹಾಗೂ ಲಾಲ್‌ಸಾಬ್‌ ನಡುವಿನ ಸಂಬಂಧದ ಬಗ್ಗೆ ಪೂರ್ಣವಾಗಿ ತಿಳಿಸಿದರೂ ಬೇರೊಬ್ಬ ಯುವತಿ ಅವರನ್ನು ಮದುವೆಯಾದರು. ಈ ಮೂಲಕ ಅವರಿಂದಲೂ ನನಗೆ ಅನ್ಯಾಯವಾಗಿದೆ’ ಎಂದೂ ದೂರಿನಲ್ಲಿ ಬರೆದಿದ್ದಾರೆ.

ಲಾಲ್‌ಸಾಬ್‌ ಕಳೆದ ಆರು ತಿಂಗಳಿಂದ ಅನಾರೋಗ್ಯದ ಕಾರಣ ರಜೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅವರ ಮೊಬೈಲ್‌ ಸಂಖ್ಯೆ ಸಂಪರ್ಕಕ್ಕೆ ಸಿಗಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT