ಭಾನುವಾರ, ಜುಲೈ 25, 2021
22 °C

40 ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಕೋವಿಡ್–19 ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾದ ಜನರಿಗೆ ನೆರವಾಗುವ ದೃಷ್ಟಿಯಿಂದ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯು ದಾನಿಗಳ ನೆರವಿನಿಂದ ಆರಂಭಿಸಿದ ‘ಹಸಿದವರತ್ತ ನಮ್ಮ ಚಿತ್ತ ಅಭಿಯಾನ'ವು 86ನೇ ದಿನಕ್ಕೆ ಕಾಲಿಟ್ಟಿದೆ. ಬುಧವಾರ ಇಲ್ಲಿನ ವಡಗಾವಿಯ 40 ಕುಟುಂಬಗಳಿಗೆ ದಿನಸಿ ಕಿಟ್‌ಗಳನ್ನು ವಿತರಿಸಲಾಯಿತು.

ಅಲಾರವಾಡ ಸೇತುವೆ ಕೆಳಗೆ ಬುಧವಾರ ನಡೆದ ಕಾರ್ಯಕ್ರಮವನ್ನು ಕನ್ನಡ ಹೋರಾಟಗಾರ ಮಲ್ಲಪ್ಪ ಅಕ್ಷರದ, ಗಜಾನನ ಗುಂಜೇರಿ, ರಾಜು ಟೋಪಗಿ ಆಯೋಜಿಸಿದ್ದರು. ಪ್ರಾದೇಶಿಕ ಆಯುಕ್ತರ ಕಚೇರಿಯ ಉಪತಹಶೀಲ್ದಾರ್‌ ಸಾರಿಕಾ ಸಿಂಗನಮಕ್ಕಿ, ರಾಜೇಶ ಸಿಂಗನಮಕ್ಕಿ, ಲೆಕ್ಕಪತ್ರ ಪರಿಶೋಧಕ ಪ್ರಕಾಶ ತಿಗಡಿ, ಹಣಕಾಸು ಇಲಾಖೆಯ ಜಂಟಿ ನಿರ್ದೇಶಕ ಈರಣ್ಣ ಚಂದರಗಿ, ರವಿ ಸಂಕೇಶ್ವರಿ, ಹರೀಶ ಕರಿಗೊಣ್ಣವರ ಕಿಟ್ ವಿತರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.