ಬೆಳಗಾವಿ: ಪಡಿತರ ಚೀಟಿದಾರರ ಮರು ನೋಂದಣಿಗಾಗಿ ನಡೆಯುತ್ತಿರುವ ಇ-ಕೆವೈಸಿ (ಬೆರಳಚ್ಚು) ಪಡೆಯಲು ನೀಡಲಾಗಿರುವ ತಂತ್ರಾಂಶ ಸಮರ್ಪಕವಾಗಿ ಕಾರ್ಯನಿರ್ವಹಿಸುವುದಕ್ಕೆ ಪೂರಕವಾಗಿ ಸರ್ವರ್ ಸಮಸ್ಯೆ ಸರಿಪಡಿಸುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಿ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರಪ್ರತಿಭಟನೆ ನಡೆಸಿದರು.

‘ಸರ್ಕಾರ ಪಡಿತರ ಚೀಟಿ ಹೊಂದಿರುವ ಸದಸ್ಯರ ಬೆರಳಚ್ಚು ಸಂಗ್ರಹವನ್ನು ಆಯಾಯ ನ್ಯಾಯಬೆಲೆ ಅಂಗಡಿಗಳ್ಲಿ ಕಡ್ಡಾಯಗೊಳಿಸಿದೆ. ಜ.1ರಿಂದ ಇದುವರೆಗೂ ಕೆವೈಸಿ ಸರ್ವರ್ ಸಮಸ್ಯೆ ಕಾಡುತ್ತಿದೆ. ಇದರಿಂದ ಪಡಿತರ ವಿತರಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಗ್ರಾಹಕರು ನ್ಯಾಯಬೆಲೆ ಅಂಗಡಿಗಳವರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಪ್ರತಿಯೊಬ್ಬರಿಂದಲೂ ಬೆರಳಚ್ಚು ಪಡೆದುಕೊಳ್ಳಲು ಬಹಳ ಸಮಯ ಬೇಕಾಗುತ್ತದೆ. ಹೀಗಾಗಿ, ಸಮಸ್ಯೆಯನ್ನು ನಿವಾರಿಸಿ ಗ್ರಾಹಕರು ಮತ್ತು ನ್ಯಾಯಬೆಲೆ ಅಂಗಡಿಯವರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಆಗ್ರಹಿಸಿದರು.

‘3 ತಿಂಗಳುಗಳಿಂದ ಪಡಿತರ ವಿತರಕರಿಗೆ ಸರ್ಕಾರದಿಂದ ಕಮಿಷನ್ ಬಂದಿಲ್ಲ. ಇದರಿಂದ ಸಂಘಗಳನ್ನು ಮುನ್ನಡೆಸುವುದು ಕಷ್ಟವಾಗಿದೆ. ತಕ್ಷಣ ಕಮಿಷನ್ ನೀಡಬೇಕು. ಜತೆಗೆ ತಾಂತ್ರಿಕ ಸಮಸ್ಯೆಗಳ ಪರಿಹಾರಕ್ಕೆ ಇಲಾಖೆಯಿಂದ ಸೂಕ್ತ ಮಾರ್ಗದರ್ಶನ ನೀಡಬೇಕು’ ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರಿ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ರಾಜಶೇಖರ ತಳವಾರ, ಜಿಲ್ಲಾ ಘಟಕದ ಉಪಾಧ್ಯಕ್ಷ ರಾಜಶೇಖರ ತಳವಾರ, ಬೈರಗೌಡ ಪಾಟೀಲ, ಮಾರುತಿ ಪಾಟೀಲ, ಮಾರುತಿ ಅಂಬೋಳಕರ್, ದಿನೇಶ ಬಾಗಡೆ, ಸರೋಜಾ ದೊಡಮನಿ, ಬಸವರಾಜ ದೊಡಮನಿ, ನಾರಾಯಣ ಕಾಲಕುಂದ್ರಿ, ಸುರೇಶ ರಾಜೂಕರ್, ರಮೇಶ ಪಾಟೀಲ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.