ರಾಯಬಾಗ: ‘ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳಿಂದ ದಿವಾಳಿಯಾಗಿದೆ. ಸರ್ಕಾರವು ಭ್ರಷ್ಟಾಚಾರದಲ್ಲಿ ಮುಳಗಿದ್ದರಿಂದ ಅಭಿವೃದ್ಧಿಗಾಗಿ ಹಿನ್ನಡೆ ಉಂಟಾಗಿದೆ. ಇದರಿಂದ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದು ಶಾಸಕ ಡಿ.ಎಂ.ಐಹೊಳೆ ಅವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಗುರುವಾರ ತಾಲೂಕಿನ ಭೆಂಡವಾಡ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಡಿ ಮಂಜೂರಾದ ₹1ಕೋಟಿ ಅನುದಾನದಲ್ಲಿ ಭೆಂಡವಾಡ- ಚಿಕ್ಕೋಡಿ ರೈಲ್ವೆ ಸ್ಟೇಷನ್ ರಸ್ತೆ ಕಾಮಗಾರಿ ಹಾಗೂ ಮಂಟೂರ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆಯಡಿ ಮಂಜೂರಾದ ₹20 ಲಕ್ಷ ಅನುದಾನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಯಬಾಗ ಮತಕ್ಷೇತ್ರದ ಅಭಿವೃದ್ಧಿಗಾಗಿ ಸದಾ ಕಂಕಣಬದ್ಧವಾಗಿದ್ದು, ಎಲ್ಲ ಗ್ರಾಮಗಳಿಗೆ ಮೂಲಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಎಇಇ ಆರ್.ಬಿ.ಮನವಡ್ಡರ, ರಾಜೇಶ ಡಂಗ, ಶೋಭಾ ಮೇಗಾಡೆ, ಸುರೇಶ ಚೌಗುಲೆ, ಅಪ್ಪು ಬಾನೆ, ನಿಂಗಪ್ಪ ಪಕಾಂಡಿ, ಸಂಗಪ್ಪಾ ಬೆನ್ನಾಳೆ, ರೇವಣು ದುಪಾದುಳೆ, ಡಾ.ಅಪ್ಪಯ್ಯ ನಾಯಿಕ, ಮಹಾದೇವ ಸಾರಾಪೂರೆ, ಉಮೇಶ ಪೂಜೇರಿ, ಅಪ್ಪಾಸಾಬ ದೇಸಾಯಿ, ರಾವಸಾಬ ದೇಸಾಯಿ, ಭೀಮು ಹಳವರ, ಉದಯ ಉಪ್ಪಾರ, ಮುತ್ತೇಪ್ಪ ನಾಯಿಕ, ಗುರುನಾಥ ಹಂಜಿ, ರಾವಸಾಬ ಮೇಗಾಡೆ, ಶಿವಾನಂದ ಉಪ್ಪಾರ ಸೇರಿ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.