ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಎಸ್ಸಿ ಪರೀಕ್ಷೆಗೆ ಓದುವುದೊಂದೇ ಬ್ರಹ್ಮಾಸ್ತ್ರ: ಡಿಸಿಪಿ ಸೀಮಾ ಲಾಟ್ಕರ್‌

Last Updated 28 ಡಿಸೆಂಬರ್ 2019, 14:08 IST
ಅಕ್ಷರ ಗಾತ್ರ

ಬೆಳಗಾವಿ: ‘ಯುಪಿಎಸ್ಸಿ ಅಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕಾದರೆ ಓದುವುದೊಂದೇ ಬ್ರಹ್ಮಾಸ್ತ್ರ. ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಇಂತಿಷ್ಟು ಸಮಯದಲ್ಲಿ ಇಂತಿಷ್ಟು ವಿಷಯವನ್ನು ಓದಬೇಕು ಎನ್ನುವ ಗುರಿ ಇಟ್ಟುಕೊಂಡು ಓದಬೇಕು’ ಎಂದು ಡಿಸಿಪಿ ಸೀಮಾ ಲಾಟ್ಕರ್‌ ಹೇಳಿದರು.

‘ಪರೀಕ್ಷೆಗಳನ್ನು ಎದುರಿಸುವ ತಂತ್ರಗಳನ್ನು, ವಿಧಾನಗಳನ್ನು ಕಲಿತುಕೊಳ್ಳಬೇಕು. ಮತ್ತೊಬ್ಬರ ಜೊತೆ ಹೋಲಿಕೆ ಮಾಡಿಕೊಳ್ಳಬಾರದು. ಅವರವರ ಸಾಮರ್ಥ್ಯ ಅವರಿಗಿರುತ್ತದೆ. ನಮ್ಮ ಸಾಮರ್ಥ್ಯ ನಮಗಿರುತ್ತದೆ’ ಎಂದು ಹೇಳಿದರು.

‘ನಮ್ಮ ಸಾಮರ್ಥ್ಯದ ಬಗ್ಗೆ ತಿಳಿದುಕೊಳ್ಳಬೇಕು. ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಸದಾ ಪ್ರಯತ್ನಿಸುತ್ತಿರಬೇಕು. ಇಂತಹ ಪ್ರಯತ್ನದಿಂದಲೇ ನಾನು ಇವತ್ತು ಇಲ್ಲಿ ನಿಂತಿದ್ದೇನೆ. ಶಾಲಾ ದಿನಗಳಲ್ಲಿ ನಾನ್ಯಾವತ್ತೂ ಒಂದೂ ಪ್ರಶ್ನೆ ಕೇಳದವಳಲ್ಲ. ನಂತರದ ದಿನಗಳಲ್ಲಿ ನನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡೆ. ಇವತ್ತು 10 ಸಾವಿರ ಜನರನ್ನು ಎದುರಿಸುವ ಶಕ್ತಿ ಬಂದಿದೆ. ಇಂತಹ ಶಕ್ತಿಯನ್ನು ತಂದುಕೊಟ್ಟಿದ್ದೇ ಓದುವುದು’ ಎಂದರು.

‘ಈಗಲೂ ನಾನು ಪ್ರತಿದಿನ ಒಂದೊಂದು ಹೊಸ ಶಬ್ದ ಕಲಿಯುತ್ತಿದ್ದೇನೆ. ಎಷ್ಟೇ ಕೆಲಸದ ಒತ್ತಡವಿದ್ದರೂ ಸಮಯ ತೆಗೆದುಕೊಂಡು ಸಿತಾರಾ ನುಡಿಸುತ್ತೇನೆ. ಪುಸ್ತಕ ಓದುತ್ತೇನೆ. ಇಂತಹದ್ದನ್ನು ಎಲ್ಲರೂ ರೂಢಿಸಿಕೊಳ್ಳಬಹುದು. ಈಗ ಇಂಟರ್‌ನೆಟ್‌, ಆನ್‌ಲೈನ್‌ ಕ್ಲಾಸಸ್‌ ಹಾಗೂ ಇತರ ಸಾಕಷ್ಟು ಅನುಕೂಲಗಳಿವೆ. ಇವುಗಳನ್ನು ಬಳಸಿಕೊಂಡು ಪರೀಕ್ಷೆಗಳನ್ನು ಎದುರಿಸಬಹುದು’ ಎಂದು ಹೇಳಿದರು.

‘ಪರಿಶ್ರಮಕ್ಕೆ ಯಾವುದೇ ರೀತಿಯ ಶಾರ್ಟ್‌ ಕಟ್‌ ಇರುವುದಿಲ್ಲ. ಪರಿಶ್ರಮ ಪಡುವುದೊಂದೇ ದಾರಿ. ‘ಕಂಫರ್ಟ್‌ ಜೋನ್‌’ನಲ್ಲಿ ನಮ್ಮ ಮನಸ್ಥಿತಿ ಇರಬಾರದು. ಕಷ್ಟ ಪಡಲು ಹಿಂಜರಿಯಬಾರದು. ಶಿಸ್ತುಬದ್ಧವಾಗಿ ಪರಿಶ್ರಮ ಪಟ್ಟರೆ ಯಶಸ್ಸು ಖಂಡಿತವಾಗಿ ಸಿಗುತ್ತದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT