ಬೆಳಗಾವಿ: ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಸಿಜಿಎಸ್ಟಿ) ಬೆಳಗಾವಿ ಆಯುಕ್ತಾಲಯದಿಂದ ಪ್ರಸಕ್ತ ವರ್ಷ ₹ 10,172 ಕೋಟಿ ಆದಾಯ ತೆರಿಗೆ ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 43ರಷ್ಟು ಹೆಚ್ಚು ಸಂಗ್ರಹವಾಗಿದೆ.

ಬೆಳಗಾವಿ, ಧಾರವಾಡ, ಗದಗ, ಕೊಪ್ಪಳ, ವಿಜಯನಗರ, ಬಳ್ಳಾರಿ, ರಾಯಚೂರು, ಯಾದಗಿರಿ, ಕಲಬುರಗಿ, ಬೀದರ್, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳನ್ನು ಒಳಗೊಂಡ ಈ ವಲಯದಲ್ಲಿ ಕಳೆದ ವರ್ಷ (2021–22) ₹ 7,124 ಕೋಟಿ ಆದಾಯ ಸಂಗ್ರಹವಾಗಿತ್ತು. ಈ ಬಾರಿ ಜಿಂದಾಲ್ ಸ್ಟೀಲ್ನಿಂದ ₹ 3,974 ಕೋಟಿ ಜಿಎಸ್ಟಿ ಪಾವತಿಯಾಗಿದ್ದು, ಇಡೀ ರಾಜ್ಯದಲ್ಲಿ ಇದು ಅತಿ ದೊಡ್ಡ ಮೊತ್ತದ ಪಾವತಿಯಾಗಿದೆ.

‘ಉತ್ತರ ಕರ್ನಾಟಕದ ತೆರಿಗೆದಾರರು ನೀಡಿದ ಸಹಕಾರ ಹಾಗೂ ಆಯುಕ್ತಾಲಯದ ಸಿಬ್ಬಂದಿ ಕಾರ್ಯಕ್ಷಮತೆಯಿಂದ ಇಷ್ಟು ದೊಡ್ಡ ಮೊತ್ತದ ಆದಾಯ ಸಂಗ್ರಹವಾಗಿದೆ. ಜೂನ್ 1ರಂದು ಇದರ ಸಂಭ್ರಮಾಚರಣೆ ಕೂಡ ಆಯೋಜಿಸಲಾಗಿದೆ’ ಎಂದು ಸಹಾಯಕ ಆಯುಕ್ತ ಸುಂದರ್ರಾಜು ಸಾಗಿ ತಿಳಿಸಿದ್ದಾರೆ.

ಕಳೆದ ವರ್ಷ ರಾಜ್ಯ ವಲಯದಿಂದ ₹ 48,440 ಕೋಟಿ ಜಿಎಸ್ಟಿ ಸಂಗ್ರಹವಾಗಿತ್ತು. ಮುಂಬೈ ವಲಯ ಹೊರತುಪಡಿಸಿದರೆ ರಾಜ್ಯವು ಎರಡನೇ ಸ್ಥಾನದಲ್ಲಿದೆ ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.