ಚಿಕ್ಕೋಡಿ: ‘ತ್ಯಾಗ, ಬಲಿದಾನದಲ್ಲಿ ಹಿಂದೂ ಧರ್ಮ ನಂಬಿಕೆ ಇಟ್ಟಿದೆ. ರಾಷ್ಟ್ರೀಯ ಸ್ವಯಂಸೇವಾ ಸಂಘದಿಂದ(ಆರ್ಎಸ್ಎಸ್) ಭಾರತದಲ್ಲಿ ಹಿಂದೂಗಳು ಒಂದಾಗಿರಲು ಸಾಧ್ಯವಾಗಿದೆ’ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಪಟ್ಟಣದ ಕಿವಡ ಮೈದಾನದಲ್ಲಿ ವಿರಾಟ್ ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ವಿರಾಟ್ ಹಿಂದೂ ಸಮ್ಮೇಳನದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

‘ಭಾರತದ ಮೇಲೆ ಬೇರೆ ಧರ್ಮದವರು ದಾಳಿ ಮಾಡಿ, ಹಿಂದೂ ಧರ್ಮ ನಾಶಪಡಿಸಲು ಯತ್ನಿಸುತ್ತಲೇ ಬಂದಿದ್ದಾರೆ. ಆದರೂ, ಹಿಂದೂ ಧರ್ಮ ಗಟ್ಟಿಯಾಗಿ ಉಳಿದುಕೊಂಡು ಬಂದಿದೆ’ ಎಂದರು.

‘ರಾಜ್ಯದಲ್ಲಿ ಆರ್ಎಸ್ಎಸ್ ನಿಷೇಧಿಸುವುದಾಗಿ ಸಚಿವರೊಬ್ಬರು ಪದೇಪದೆ ಹೇಳುತ್ತಿದ್ದಾರೆ. ಆದರೆ, ಇಂಥ ಹೇಳಿಕೆ ನೀಡಿದಾಗಲೆಲ್ಲ ಹಿಂದೂ ಧರ್ಮೀಯರು ಒಗ್ಗಟ್ಟಾಗುತ್ತಿದ್ದಾರೆ. ವಿಶ್ವದ ಆರ್ಥಿಕತೆಯಲ್ಲಿ ಭಾರತ ಈಗ ನಾಲ್ಕನೇ ಸ್ಥಾನದಲ್ಲಿದೆ. ಮುಂದಿನ ಆರು ತಿಂಗಳಲ್ಲಿ ಮೂರನೇ ಸ್ಥಾನಕ್ಕೆ ತಲುಪಲಿದೆ’ ಎಂದು ತಿಳಿಸಿದರು.

ಮುನಿರಾಜ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು.

ಚಿಕ್ಕೋಡಿಯ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ, ಸಂಚಾಲನಾ ಸಮಿತಿ ಅಧ್ಯಕ್ಷ ಜಗದೀಶ ಕವಟಗಿಮಠ, ಸುಭಾಷ ಕವಲಾಪುರೆ, ಶ್ರೀಪಾಲ ಮುನ್ನೋಳಿ, ಅನಿಲ ಮಾನೆ, ಸಂಜಯ ಅರಗಿ, ದೀಪಾಲಿ ದಿಂಡೋರ, ಪ್ರವೀಣ ಕಾಂಬಳೆ, ಶಾಂಭವಿ ಅಶ್ವತ್ಥಪುರ, ಬಾಹುಬಲಿ ನಸಲಾಪುರೆ, ರಮೇಶ ಕುಡತರಕರ, ವಿನಾಯಕ ಬನಹಟ್ಟಿ, ಸದಾಶಿವ ಮಾಳಿ, ಸುದರ್ಶನ ತಮ್ಮಣ್ಣವರ, ರಾಜು ದೀಕ್ಷಿತ, ಪ್ರಾಣೇಶ ಕೌಜಲಗಿ ಇತರರಿದ್ದರು. ಸುನೀಲ ರಜಪೂತ ನಿರೂಪಿಸಿದರು. ಸಂಜು ಅರ್ಗೆ ಸ್ವಾಗತಿಸಿದರು.

ಇದಕ್ಕೂ ಮುನ್ನ, ಪಟ್ಟಣದ ಬಸವೇಶ್ವರ ವೃತ್ತದಿಂದ ಆರಂಭಗೊಂಡ ಶೋಭಾಯಾತ್ರೆ ಪ್ರಮುಖ ಬೀದಿಗಳಲ್ಲಿ ಸಾಗಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.