ಬೆಳಗಾವಿ: ‘ನದಿ, ಕಾಡು, ಗುಹೆಗಳಲ್ಲಿ ತಪಸ್ಸು ಮಾಡದೇ ದಾಂಪತ್ಯ ಜೀವನದಲ್ಲಿ ಇದ್ದುಕೊಂಡು ಕಾಯಕ, ದಾಸೋಹ, ಅನುಭಾವ, ಶಿವಯೋಗದೊಂದಿಗೆ ಭಕ್ತಿಮಾರ್ಗದಲ್ಲಿ ಯಶಸ್ಸು ಕಂಡವರು ಬಸವಾದಿ ಶರಣರು. ಅಜ್ಞಾನದಿಂದ ಜ್ಞಾನದೆಡೆಗೆ ಗೃಹಸ್ಥ ಧರ್ಮವನ್ನು ಪಾಲಿಸುತ್ತ ಸಮಾಜಕ್ಕೆ ದಾರಿದೀಪವಾದರು’ ಎಂದು ಸಂಶೋಧಕ ಬಾಳಪ್ಪ ಚಿನಗುಡಿ ಹೇಳಿದರು.

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದಿಂದ ಇಲ್ಲಿನ ಮಹಾಂತೇಶ ನಗರ ಮಹಾಂತಭವನದಲ್ಲಿ ಮಂಗಳವಾರ ಏರ್ಪಡಿಸಿದ ಮಾಸಿಕ ಅನುಭಾವ ಗೋಷ್ಠಿಯಲ್ಲಿ ‘ಶರಣರ ಗೃಹಸ್ಥ ಧರ್ಮ’ ವಿಷಯದ ಮೇಲೆ ಉಪನ್ಯಾಸ ನೀಡಿದರು.

‘ಲಿಂಗ, ಜಾತಿ ಕುಲ ಕಸಬುಗಳ ಆಧಾರದ ಮೇಲೆ ಶೋಷನೆ ಮಾಡುತ್ತಿದ್ದ ಸಂದರ್ಭದಲ್ಲಿ ಬಸವಣ್ಣನವರು ಶೋಷಿತರಿಗೆ ಬೆಳಕಾಗಿ ಕಂಡರು. ಮೋಕ್ಷ ಸಾಧನೆಗೆ ಸರ್ವರೂ ಅರ್ಹರು ಎಂಬುದನ್ನು ನಿರೂಪಿಸಿದರು’ ಎಂದರು.

ಸಾನ್ನಿಧ್ಯ ವಹಿಸಿದ್ದ ನಾಗನೂರು ರುದ್ರಾಕ್ಷಿ ಮಠದ ಅಲ್ಲಮಪ್ರಭು ಸ್ವಾಮಿಗಳು ವಚನ ಕಂಠಪಾಠ ವಿಜೇತರಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಿ ಆಶಿರ್ವಚನ ನೀಡಿದರು. ಹಿರಿಯರಾದ ಅಡಿವೆಪ್ಪ ಬೆಂಡಿಗೇರಿ ಅಧ್ಯಕ್ಷತೆ ವಹಿಸಿದ್ದರು. ಷಟಸ್ಥಲ ಧ್ವಜಾರೋಹಣ ನೆರವೇರಿಸಿದ ನೈನಾ ಗಿರಿಗೌಡರ, ವಚನ ಕಂಠಪಾಠ ಪ್ರಾಯೋಜಕ ಬಸವರಾಜ ಮಿಂಡೊಳ್ಳಿ ವೇದಿಕೆ ಮೇಲಿದ್ದರು.

ಜಾಗತಿಕ ಲಿಂಗಾಯತ ಮಹಾಸಭಾದ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಎಂ. ಬೂದಿಹಾಳ ಪ್ರಾಸ್ಥಾವಿಕ ಮಾತನಾಡಿದರು. ಜಿಲ್ಲಾ ಖಜಾಂಚಿ ಮುರಿಗೆಪ್ಪ ಬಾಳಿ, ಗುರುಬಸವ ಬಳಗದ ಸಂಚಾಲಕ ಮಹಾಂತೇಶ ತೋರಣಗಟ್ಟಿ ಕಾರ್ಯಕ್ರಮ ನಿರೂಪಿಸಿದರು. ಭಾರತಿ ರಾಮಗುರವಾಡಿ ವಂದಿಸಿದರು.

ಈರಣ್ಣ ಚಿನಗುಡಿ, ಪ್ರವೀಣಕುಮಾರ ಚಿಕ್ಕಲಿ, ಎಸ್.ಜಿ. ಸಿದ್ನಾಳ, ಆನಂದ ಕೊಂಡಗುರಿ, ಎಫ್.ಆರ್. ಪಾಟೀಲ, ಸೂರನಾಯಕ ಇಂಚಲ, ಅರವಿಂದ ಪರೂಶೆಟ್ಟಿ ಸುಜಾತಾ ಮತ್ತಿಕಟ್ಟಿ ರತ್ನಾ ಬೆಣಚನಮರಡಿ ಮುಂತಾದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.