ಸೋಮವಾರ, ಮೇ 16, 2022
30 °C

ಮಲಬಾರ್‌ ಮಳಿಗೆಯಲ್ಲಿ ಸಿಲ್ವರ್ ಶೋ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಇಲ್ಲಿನ ಕಾಲೇಜು ರಸ್ತೆಯಲ್ಲಿರುವ ಮಲಬಾರ್‌ ಗೋಲ್ಡ್ ಅಂಡ್ ಡೈಮಂಡ್ಸ್‌ ಮಳಿಗೆಯಲ್ಲಿ ಬೆಳ್ಳಿ ಮತ್ತಿತರ ಆಭರಣಗಳ ಪ್ರದರ್ಶನ ಮತ್ತು ಮಾರಾಟದ ‘ಸಿಲ್ವರ್ ಶೋ’ ಹಮ್ಮಿಕೊಳ್ಳಲಾಗಿದೆ.

ಶನಿವಾರ ಆರಂಭವಾಗಿದ್ದು ಫೆ. 28ರವರೆಗೆ ನಡೆಯಲಿದೆ. ಆಕರ್ಷಕ ಆಭರಣಗಳನ್ನು ಪ್ರದರ್ಶಿಸಲಾಗಿದೆ. ಫ್ಯಾಷನ್ ಡಿಸೈನರ್ ಜ್ಯೋತಿ ಜೈನ್, ಈವೆಂಟ್  ಮ್ಯಾನೇಜ್ಮೆಂಟ್ ತಂಡದ ನಿಖಿತಾ ಆರ್. ಬೊಮ್ಮಣ್ಣನವರ, ಶಿಕ್ಷಕಿ ನಾಝಿಯಾ ಸೈಯದ್, ರೇಣುಕಾ ಶುಗರ್ಸ್‌ನ ಹಿರಿಯ ವ್ಯವಸ್ಥಾಪಕಿ ರೇಣು ಯಳ್ಳೂರಕರ ಹಾಗೂ ಗೃಹಿಣಿ ರೇಷ್ಮಾ ಚಾಲನೆ ನೀಡಿದರು.

₹ 5ಸಾವಿರ ಮೌಲ್ಯದ ಬೆಳ್ಳಿ ಆಭರಣ ಖರೀದಿಸುವ ಗ್ರಾಹಕರಿಗೆ ₹ 500 ಮೌಲ್ಯದ ಬೆಳ್ಳಿ ಆಭರಣ ಉಚಿತವಾಗಿ ನೀಡಲಾಗುವುದು. ಸಾಂಪ್ರದಾಯಿಕ ಮತ್ತು ಆಧುನಿಕ ವಿನ್ಯಾಸಗಳ ಗುಣಮಟ್ಟ ಖಾತ್ರಿಯ ಆಭರಣಗಳು ಗ್ರಾಹಕರಿಗೆ ದೊರೆಯಲಿವೆ ಎಂದು ಕಂಪನಿ ತಿಳಿಸಿದೆ. ಆಸಕ್ತರು ಮಾಹಿತಿಗೆ ಮೊ: 7994435481 ಸಂಪರ್ಕಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು